ಬೆಳಗಾವಿ. ಕಾಗವಾಡ “ದೇಶವೇ ತಮ್ಮ ಮನೆಯೆಂದು,ಇಲ್ಲಿನ ದೇಶವಾಸಿಗಳೇ ತಮ್ಮ ಸಹೋದರರು ಎಂದು ತಿಳಿದಿರುವ ನಮ್ಮ ಭಾರತಾಂಬೆಯ ಹೆಮ್ಮೆಯ ಸುಪುತ್ರರಾದ ವೀರಯೋಧರನ್ನು ಸ್ಮರಿಸುವುದೆಂದರೆ ನಮ್ಮ ಭಾರತ ಮಾತೆಯನ್ನು ಗೌರವಿಸಿದಂತೆ” ಎಂದು ಶಿರಗುಪ್ಪಿಯ ಕೆ.ಎಲ್.ಇ ಪದವಿ ಕಾಲೇಜಿನ ಹಿಂದಿ ಪ್ರಾಧ್ಯಾಪಕ ಪ್ರೊ.ಎಸ್ ಶಿರಗುಪ್ಪೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕಳೆದ ದಿನಾಂಕ 14 ರಂದು ಸೋಮವಾರ ನೆರೆಯ ಕಾಗವಾಡ ತಾಲ್ಲೂಕು ಕೆ.ಎಲ್.ಇ. ಪದವಿಪೂರ್ವ ಮಹಾವಿದ್ಯಾಲಯ ಶಿರಗುಪ್ಪಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಹಮ್ಮಿಕೊಂಡ ಆಜಾದಿಕಾ ಅಮೃತ ಮಹೋತ್ಸವದ ಪ್ರಯುಕ್ತ *ಮೇರಿ ಮಾಟಿ ಮೇರಾ ದೇಶ ವೀರೋಕಾ ನಮನ* ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ದೇಶ ಸೇವೆಯೇ ಈಶ ಸೇವೆ ಎಂದು ಪರಿಪೂರ್ಣ ವಿಶ್ವಾಸ ಇರಿಸಿ ಹಗಲಿರುಳು ಎನ್ನದೇ ದೇಶದ ಹಿತರಕ್ಷಣೆ ಬಯಸುವ ಯೋಧರನ್ನು ಗೌರವಿಸುವುದು ಅತ್ಯಂತ ಪವಿತ್ರ ಕಾರ್ಯವಾಗಿದೆ. ಎಂದು ಹೇಳಿ ಶಾಸ್ತ್ರೀಜಿ ಅವರ “ಜೈ ಜವಾನ ಜೈ ಕಿಸಾನ್” ಘೋಷ ವಾಕ್ಯದ ಮಹೋನ್ನತ ಉದ್ದೇಶವನ್ನು ಮಾರ್ಮಿಕವಾಗಿ ವಿಶ್ಲೇಷಿಸಿದರು.ಇದಕ್ಕೂ ಮೊದಲು ಆಗಮಿಸಿದ್ದ ವೀರಯೋದರನ್ನು ಮಣ್ಣಿನ ಕಳಶದೊಂದಿಗೆ ಎನ್ ಎಸ್ ಎಸ್ ಶಿಬಿರಾರ್ಥಿಗಳು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಪ್ರೊ.ರಂಜನಾ ಬಿ. ನರವಾಡೆ ಅವರು ಪಂಚ ಪ್ರಾಣ ಪ್ರತಿಜ್ಞಾ ವಿಧಿಗಳನ್ನು ಬೋಧಿಸಿದರು. ನಂತರ ಆಗಮಿಸಿದ್ದ ಸಕಲ ಯೋಧರನ್ನು ಎನ್. ಎಸ್.ಎಸ್.ಘಟಕದ ಪರವಾಗಿ ವೇದಿಕೆಯ ಮೇಲಿನ ಗಣ್ಯರು ಅಭಿಮಾನದಿಂದ ಸತ್ಕರಿಸಿದರು.
ಮೇಜರರಾದ ಶ್ರೀ ಪೋಪಟ ರೆಂದಾಳೆ ತಮ್ಮ ಸೈನಿಕ ಜೀವನದ ಅನುಭವಗಳನ್ನು ಚೆನ್ನಾಗಿ ಮೆಲುಕು ಹಾಕಿದರು. ಪ್ರಸ್ತುತ ದೇಶ ಸೇವೆಯಲ್ಲಿರುವ ಸೈನಿಕರಾದ ಕ್ಯಾಪ್ಟನ್ ಶ್ರೀ ಪೋಪಟ ರೆಂದಾಳೆ, ಸುಭೇದಾರ ಮೇಜರ ಶ್ರೀ ಸುರೇಶ ರೆಂದಾಳೆ, ಶ್ರೀ ಪ್ರವೀಣ ಮಡಿಗಾಳ, ಶ್ರೀ ರಮೇಶ ಹಿರೇಕುರುಬರ, ಶ್ರೀ ರೋಹಿತ ಕದಮ, ಶ್ರೀ ಪ್ರಶಾಂತ ಕಾಂಬಳೆ ಹಾಗೂ ನಿವೃತ್ತ ಸೈನಿಕರಾದ ಶ್ರೀ ಅಣ್ಣಾಸಾಹೇಬ ಕುಪ್ಪಾನಟ್ಟಿ, ಹಾಗೂ ಶ್ರೀ ಬಾಳಾಸಾಹೇಬ ಹಂಚಿನಾಳ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ದೀಪ ದಾನದೊಂದಿಗೆ ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶಭಕ್ತರಿಗೆ, ಹಾಗೂ ವೀರ ಯೋಧರಿಗೆ ಗೌರವ ಸಮರ್ಪಿಸಲಾಯಿತು. ಸಮಾರಂಭದ ಘನ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ ಅವರು ಅಧ್ಯಕ್ಷೀಯ ಆಶಯ ನುಡಿಗಳನ್ನು ಆಪ್ತವಾಗಿ ಹಂಚಿಕೊಂಡರು. ಆರಂಭದಲ್ಲಿ ಎನ್ ಎಸ್.ಎಸ್.ಸಂಯೋಜಕರಾದ ಪ್ರೊ.ಬಿ.ಆರ್.ನರವಾಡೆ ಸ್ವಾಗತಿಸಿದರು. ಪ್ರೊ.ಕೆ.ಎ. ಮಾಳಿ ಸಮ್ಮಾನ ಕಾರ್ಯಕ್ರಮ ನೆರವೇರಿಸಿದರು. ಪ್ರೊ.ರಂಜನಾ ಬಿ.ನರವಾಡೆ ನಿರೂಪಿಸಿದರು. ಕೊನೆಗೆ ಶ್ರೀಮತಿ ಪ್ರೊ.ಎಸ್.ಬಿ.ಚೌಗುಲೆ ವಂದಿಸಿದರು.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*