ಬೆಳಗಾವಿ : ರಂದು, ಸ್ವತಂತ್ರ ದಿನಾಚರಣೆಯ ನಿಮಿತ್ಯ ದೇಶಭಕ್ತಿ ಗೀತೆಗಳ ಸ್ಪರ್ಧೆ ಎನ್ ಎಸ್ ಪೈ ಪ್ರಾಥಮಿಕ ಶಾಲೆಯಲ್ಲಿ ಹೆಮ್ಮೆಯಿಂದ ಜರುಗಿದೆ..
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಯತ್ನ ಸಂಘಟನೆಯ ಮುಖ್ಯಸ್ಥರಾದ ಶ್ರೀಮತಿ ಶಾಂತ ಆಚಾರ್ ಆಗಮಿಸಿ ಭಾರತಾಂಬೆ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..
ತಮ್ಮ ಸಂಘಟನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ 10 ಮಕ್ಕಳಿಗೆ ಶಾಲಾ ಶುಲ್ಕ ತುಂಬಲು ಚೆಕ್ ವಿತರಿಸಿದರು, ನಂತರ
ಮಕ್ಕಳು ದೇಶಭಕ್ತಿಯ ಭಾಷಣವನ್ನು ಮಾಡಿ, ಹುಮ್ಮಸ್ಸಿನಿಂದ ದೇಶಭಕ್ತಿ ಗೀತೆಗಳನ್ನು ಹಾಡಿದರು..
ಶಾಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಧಿಕಾ ನಾಯಕ್ ಅವರು ಶಾಲಾ ಸಂಸತ್ತಿನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದರು, ಸ್ಕೌಟ್ ಗೈಡ್ ಮಕ್ಕಳಿಗೆ ಸಹ ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ ಮಾತನಾಡಿದ ಅತಿಥಿಗಳು ಆರ್ಥಿಕ ಅನಾನುಕೂಲತೆಯಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಬಾರದು, ಸ್ವಲ್ಪ ಪ್ರಮಾಣದ ಶುಲ್ಕದ ಭಾಗವನ್ನು ಮಕ್ಕಳಿಗೆ ಸಹಾಯ ಮಾಡಿ ಮಕ್ಕಳು ಬೆಳೆಯಲು ಪಾಲಕರು ಹಾಗೂ ಶಿಕ್ಷಕರು ಎಲ್ಲ ರೀತಿಯಿಂದ ಪ್ರೇರಣೆ ಮಾಡಬೇಕು, ವೇದಿಕೆಗೆ ಮಗು ಬಂದು ನಿಂತು ಮಾತನಾಡುವ ಧೈರ್ಯಕ್ಕೆ ಅವಕಾಶ ಕೊಡಬೇಕು ಎಂದು ಬಹಳ ಮಾರ್ಮಿಕವಾಗಿ ಮಾತನಾಡಿದರು…
ಉತ್ಸಾಹದಿಂದ ಮಕ್ಕಳು ದೇಶಭಕ್ತಿ ಗೀತೆಯನ್ನು ಹಾಡಿ ಹೆಮ್ಮೆ ಮೂಡಿಸಿದರು, ಸಂಚಾಲಕಿಯರಾದ ಶ್ರೀಮತಿ ಸುಮನ್ ಜೋಶಿ ಹಾಗೂ ಶ್ರೀಮತಿ ಸವಿತಾ ಕಾವಳೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು, ಮಕ್ಕಳಿಗೆ ಬಿಸ್ಕೆಟ್ ಮತ್ತು ಚಾಕ್ಲೇಟ್ ಅನ್ನು ಪ್ರಯತ್ನ ಸಂಘಟನೆಯ ಸದಸ್ಯರು ವಿತರಿಸುವ ಮೂಲಕ ಸ್ಪರ್ಧಾ ಕಾರ್ಯಕ್ರಮ ಸಂಪನ್ನಗೊಂಡಿತು..