ಮೊಬೈಲ್ ದಾಸರಾಗದೇ ಪುಸ್ತಕಗಳ ದಾಸರಾಗಿ:
*ಡಾ.ಜಯವೀರ ಎ.ಕೆ

Share the Post Now

*ರಾಯಬಾಗ:* ಶೈಕ್ಷಣಿಕ ಜೀವನದಲ್ಲಿ ನಿಜಕ್ಕೂ ಅಧ್ಯಯನ ಒಂದು ತಪಸ್ಸು ಇದ್ದಂತೆ!. ನೀವೆಲ್ಲರೂ ಮೊಬೈಲ್ ದಿಂದ ದೂರ ಸರಿದು ಅಮೂಲ್ಯ ಸಮಯವನ್ನು ಹಾಳು ಮಾಡದೇ ಸದಾವಕಾಲ ಪುಸ್ತಕಗಳು ನಿಮ್ಮ ಒಳ್ಳೆಯ ಸಂಗಾತಿಯನ್ನಾಗಿ ಮಾಡಿಕೊಂಡು ಪುಸ್ತಕಗಳ ದಾಸರಾಗಬೇಕು ಎಂದು ಶಿರಗುಪ್ಪಿಯ ಕೆ.ಎಲ್.ಇ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು,ಸಾಹಿತಿ ಡಾ.ಜಯವೀರ ಎ.ಕೆ. ಅಭಿಮತ ವ್ಯಕ್ತಪಡಿಸಿದರು.
ಅವರು ಶುಕ್ರವಾರ ದಿನಾಂಕ 18 ರಂದು ತಾಲ್ಲೂಕಿನ ಹಾರೂಗೇರಿ ಪಟ್ಟಣದ ಶ್ರೀ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಏಕಲವ್ಯ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿ.ಯು.ಸಿ.ವಿದ್ಯಾರ್ಥಿಗಳ ಸ್ವಾಗತ, ಪ್ರಸಕ್ತ ಸಾಲಿನ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಪ್ರಾಮಾಣಿಕತೆ ಹಾಗೂ ಆತ್ಮವಿಶ್ವಾಸ ನಿಮ್ಮ ಎರಡು ಕಣ್ಣುಗಳಾಗಬೇಕು. ವಿನಯ ಎಂಬ ಬಟ್ಟೆ ತೊಟ್ಟು ಅಂತರಂಗದಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿಕೊಂಡು ಆದರ್ಶ ವ್ಯಕ್ತಿಯಾಗಿ ಕಂಗೊಳಿಸಬೇಕೆಂದು ಹೇಳಿದರು. ಯಾವುದೇ ಕಾರಣಕ್ಕೂ ನಿಮ್ಮ ಮನದಲ್ಲಿ ನಿರಾಸೆ ಸುಳಿಯಬಾರದು. ಸಕಾರಾತ್ಮಕವಾಗಿ ಆಲೋಚಿಸಿ ಸಾಧನೆಯ ಹೆದ್ದಾರಿಯಲ್ಲಿ ಸಾಗಬೇಕು ಎಂದು ಹೇಳಿದರು.ಇನ್ನೋರ್ವ ಅತಿಥಿ ಶಿರಗೂರ ಸರಕಾರಿ ಪ್ರೌಢಶಾಲೆಯ ಆದರ್ಶ ಶಿಕ್ಷಕರಾದ ಶ್ರೀ ಎಸ್.ಎಸ್.ಆಶ್ರಿತ ಅವರು “ನೀವೆಲ್ಲರೂ ಜೇನು ನೊಣಗಳು ಆಗಬೇಕು.ಜ್ಞಾನ ಎಂಬ ಮಕರಂದ ಹೀರಿ ವಿದ್ಯೆಯ ಪರ್ವತ ಏರಬೇಕು. ಪಿ.ಯು.ಸಿ ದ್ವಿತೀಯ ವಿಜ್ಞಾನ ಕೋರ್ಸ ಮುಗಿಸಿದ ಮೇಲೆ ಸಿಗುವ ಉನ್ನತ ಹುದ್ದೆಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು. ಇದು ಸಾಧಕರ ಯುಗ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವೆಲ್ಲರೂ ಅಧ್ಯಯನಶೀಲರಾಗಿ ಬಯಸಿದ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬೇಕು ಎಂದು ನುಡಿದರು. ಇದಕ್ಕೂ ಮೊದಲು ಆಗಮಿಸಿದ ಗಣ್ಯರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಥಮ ಪಿ.ಯು.ಸಿ ಯಲ್ಲಿ ಅಧ್ಯಯನ ಮಾಡುತ್ತಿರುವ
ಹಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಸೊಗಸಾಗಿ ಹಂಚಿಕೊಂಡರು.ಸಂಸ್ಥೆಯ ಸಲಹಾ ಸಮೀತಿಯ ಅಧ್ಯಕ್ಷ ಶ್ರೀ ಸಿದ್ದಪ್ಪ ಬನಾಜ ಅವರು ಮಾತನಾಡಿ “ತಾವೆಲ್ಲರೂ ಈ ಸಂಸ್ಥೆಯಲ್ಲಿ ಶ್ರದ್ಧೆಯಿಂದ ಅಧ್ಯಯನ ಮಾಡಿ ಪಾಲಕರ ನಿರೀಕ್ಷೆಗೂ ಮೀರಿ ಬೆಳೆಯಬೇಕು ಎಂದು ಹೇಳಿದರು. ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಆರ್.ಎಂ.ಗಸ್ತಿ ಅವರು ಅಧ್ಯಕ್ಷೀಯ ಆಶಯ ನುಡಿಗಳನ್ನು ಹಂಚಿಕೊಂಡರು. ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀ ಪ್ರಮೋದ ಆರ್.ಗಸ್ತಿ,ನಿರ್ದೇಶಕ ಶ್ರೀ ರವಿ ಆರ್ ಗಸ್ತಿ, ದೈಹಿಕ ಶಿಕ್ಷಣ ಪ್ರಾಚಾರ್ಯ ಶ್ರೀ ಡಿ.ಪಿ.ಸದಲಗಿ ಹಾಗೂ ಪ್ರಾಚಾರ್ಯ ಶ್ರೀ ವಿ.ಬಿ.ಮುತ್ತಣ್ಣವರ ವೇದಿಕೆ ಮೇಲೆ ಉಪಸ್ಥಿತರಿದ್ದರು.ಉಪನ್ಯಾಸಕ ಶ್ರೀ ಸ್ವಪ್ನಿಲ್ ಸಾಜನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಶ್ರೀ ವಿ.ಬಿ.ಮುತ್ತಣ್ಣವರ ಸ್ವಾಗತಿಸಿದರು. ಕು. ಪ್ರಿಯಾ ಹಳ್ಳೆಪ್ಪಗೋಳ ಹಾಗೂ ಕು. ಸುಹಾನ್ ಕಿಲ್ಲೇದಾರ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಕು.ಆಕಾಶ ಮುಧೋಳ ವಂದಿಸಿದರು.

ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!