ಮುಗಳಖೋಡ: ಕೋಟ್ಯಾಂತರ ಭಾರತೀಯರ ಪ್ರಾರ್ಥನೆಯಂತೆ ಇಸ್ರೋ ವಿಜ್ಞಾನಿಗಳ ಪರಿಶ್ರಮದಿಂದ ಚಂದ್ರಯಾನ-03 ಯಶಸ್ವಿಯಾದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಮೇಶ್ ಖೇತಗೌಡರ ಅವರ ನೇತೃತ್ವದಲ್ಲಿ ಪಟ್ಟಣದ ಮುಖಂಡರು, ಯುವಕರು ಸೇರಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಇಸ್ರೋ ಮಹಾಸಾಧನೆಗೆ ಸಲಾಂ, ಭಾರತ ಮಾತಾ ಕಿ ಜೈ ಎಂದು ಜೈ ಘೋಷ ಕೂಗುತ್ತಾ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಂಕರ ಕಡಕಬಾಂವಿ, ಶಿವಬಸು ಕಾಪಸಿ, ಗೌಡಪ್ಪ ಖೇತಗೌಡರ, ಮಹಾದೇವ ಶೇಗುಣಸಿ, ನಾಗಪ್ಪ ಹುಕ್ಕೇರಿ, ಯಲ್ಲಾಲಿಂಗ ಶೇಗುಣಸಿ, ಅಶ್ವತ ಯಡವಣ್ಣವರ, ಮಹಾಂತೇಶ ಪೂಜೆರಿ, ಸಿದ್ದು ಖೇತಗೌಡರ ಹಾಗೂ ಮತ್ತಿತರರು ಉಪಸ್ಥಿತಿರಿದ್ದರು,






