ಹಣ ಕೊಟ್ಟವರಿಗೆ ಶಿಕ್ಷಕ ಹುದ್ದೆ ಮರಾಠ ಮಂಡಳಿ ಶಿಕ್ಷಣ ಸಂಸ್ಥೆಯ ಮೇಲೆ ಆರೋಪ

Share the Post Now

ಬೆಳಗಾವಿ: ಸರ್ಕಾರದ ಆದೇಶ ಉಲ್ಲಂಘಿಸಿ ಮರಾಠ ಮಂಡಳಿ ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪಡೆದು ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ ಎಂದು ಅಕ್ಷತಾ ಶ್ರೀನಿವಾಸ್ ನಾಯ್ಕ್ ಆರೋಫಿಸಿದ್ದಾರೆ.
ಕಳೆದ 9 ವರ್ಷಗಳಿಂದ ಮರಾಠ ಮಂಡಳಿ ಶಿಕ್ಷಣ ಸಂಸ್ಥೆಯಲ್ಲಿ ಇಂಗ್ಲೀಷ್ ವಿಷಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷ ರಾಜಶ್ರೀ ಹಲಗೆಕರ್ ಇವರಿಂದ ಪದೇ ಪದೇ ಭರವಸೆಗಳನ್ನು ನೀಡುತ್ತಾ ಬಂದಿದ್ದರು. ಆದರೆ ಈಗ ಸರ್ಕಾರಿ ಅನುದಾನದಲ್ಲಿ ಶಿಕ್ಷಕರ ನೇಮಕಾತ ಅರ್ಹತೆ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಬೇಕು ಎಂದು ಸರ್ಕಾರದ ಸ್ಪಷ್ಟ ಆದೇಶವಿದೆ ಆದರೆ ಸರ್ಕಾರದ ಆದೇಶ ಲಂಗಿಸಿ ಲಕ್ಷಾಂತರ ಹಣದ ವಿವರ ಮಾಡುವ ಮೂಲಕ ಸರ್ಕಾರಿ ನೌಕ್ರಿಯೆ ನೀಡಲಾಗುತ್ತಿದೆ ಎಂದು ದೂರಿದರು.
ನಾನು ಟಾಪ್ 10 ಪಟ್ಟಿಯಲ್ಲಿ ಎರಡನೇ ಟಾಪರ್ ಆಗಿದ್ದೇನೆ. ಆದರೆ ನನಗೆ ಇದರಿಂದ ವಂಚಿತ ಗೊಳಿಸಲಾಗುತ್ತಿದೆ ಸರ್ಕಾರಿ ನೌಕರಿಗಳು 10 ರಿಂದ 12 ಲಕ್ಷ ಇದಕ್ಕಿಂತ ಹೆಚ್ಚು ಹಣದ ಬೇಡಿಕೆ ವಾಗುತ್ತಾ ಇದೆ.  ಆದ್ದರಿಂದ ಇದಕ್ಕೆಲ್ಲ ಬೇಸತ್ತು ನಾನು ಮರಾಠ ಮಂಡಳಿ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ರಾಜಶ್ರೀ ಹಲಗೆಕರ್ ಅವರ  ವಿರುದ್ಧ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳಿಗೆ ದೂರ ನೀಡಿದ್ದೇನೆ ಮತ್ತು ನನ್ನ ನನ್ನ ಪ್ರಾಣಕ್ಕೆ ಹಾಗೂ ನನ್ನ ಕುಟುಂಬದ ಸದಸ್ಯರುಗಳ ಯಾವುದೇ ರೀತಿಯ ಜೀವ ಬೆದರಿಕೆ ವಾದಲ್ಲಿ ಇದಕ್ಕೆ ಮರಾಠ ಮಂಡಲ ಅಧ್ಯಕ್ಷೆ ರಾಜಶ್ರೀ ಹಲಗೆಕರ್ ಅವರ ಪತಿ ನಾಗರಾಜ್ ಯಾದವ್ ಸಂಪೂರ್ಣ ಹೊಣೆಗಾರಿಕೆ ಆಗಿರುತ್ತಾರೆ ಎಂದು ಅಕ್ಷತಾ ಶ್ರೀನಿವಾಸ್ ನಾಯಕ್ ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು

Leave a Comment

Your email address will not be published. Required fields are marked *

error: Content is protected !!