ಸೆ. 3 ರಿಂದ ಪಂಚಮಸಾಲಿ ಮೀಸಲಾತಿ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ..

Share the Post Now


ಪಂಚಮಸಾಲಿ ಸಮಾಜ ಹಳ್ಳಿ ಹಳ್ಳಿಗಳಲ್ಲಿ ಸಂಘಟಿತವಾಗಲಿ.

ಹೋರಾಟ ಸಮಿತಿ ಅಧ್ಯಕ್ಷರಾಗಿ ಡಾ. ಸಿ. ಆರ್. ಗುಡಸಿ ಆಯ್ಕೆ…

ವರದಿ: ಸಂಗಮೇಶ ಹಿರೇಮಠ.



ಮುಗಳಖೋಡ: ಬರುವ ಸೆಪ್ಟೆಂಬರ್ 3 ರಿಂದ ಪಂಚಮಸಾಲಿ 2ಎ ಮೀಸಲಾತಿಗಾಗಿ ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವುದರ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.



ಅವರು ಬುಧವಾರ ಮುಗಳಖೋಡ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಾಯಬಾಗ ತಾಲೂಕ ಪಂಚಮಸಾಲಿ ಸಮಾಜದ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿ ಈ ಹಿಂದಿನ ಸರ್ಕಾರ ನಮಗೆ ಸ್ಪಂದನೆ ನೀಡಿತ್ತು. ಈಗ ನಮಗೆ 2ಎ ಮಿಸಲಾತಿ ಅವಶ್ಯಕತೆಯಾಗಿದೆ.

ಇಲ್ಲಿಯವರೆಗೆ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. ಸದ್ಯದ ಕಾಂಗ್ರೆಸ್ ಸರ್ಕಾರ ಅಧಿವೇಶನ ಮುಗಿದ ಬಳಿಕ ಚರ್ಚಿಸಿ ಮೀಸಲಾತಿ ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿತ್ತು. ಆದರೆ ಇಲ್ಲಿಯವರೆಗೂ ಅದರ ಬಗ್ಗೆ ಚರ್ಚೆಯಾಗದಿರುವ ಕಾರಣ ಹೋರಾಟ ಕೈಗೆತ್ತಿಕೊಳ್ಳಲಾಗುತ್ತಿದೆ.

ಇವತ್ತಿನ ಕಾಂಗ್ರೆಸ್ ಸರ್ಕಾರ ಮನಸ್ಸು ಮಾಡಿ, ಹಿಂದಿನ ಸರ್ಕಾರ ನೀಡಿದ 2ಡಿ ಮೀಸಲಾತಿಯನ್ನು ರದ್ದುಗೊಳಿಸಿ, ನಮಗೆ ಬೇಕಾಗಿರುವ 2ಎ ಮೀಸಲಾತಿ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಕೇಳಿಕೊಳ್ಳುವೆ ಎಂದರು.

ಮೀಸಲಾತಿ ಸಿಗದೇ ಹೋದರೆ ನಿಪ್ಪಾಣಿಯಿಂದ ಚಾಲನೆಗೊಳ್ಳುವ ಈ ಹೋರಾಟ ರಾಜ್ಯಾದ್ಯಂತ ಬೃಹತ್ ಪ್ರಮಾಣದಲ್ಲಿ ಮುಂದುವರೆಯಲಿದೆ ಎಂದು ಹೇಳಿ,
ತಾಲೂಕಿನ ಎಲ್ಲಾ ಪಂಚಮಸಾಲಿ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು, ಯುವಕರು, ಮಹಿಳೆಯರು ನಿಪ್ಪಾಣಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾಗೂ ನಿರಂತರ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಅಶೋಕ ಕೊಪ್ಪದ ಹಾಗೂ ಸುರೇಶ ಹೊಸಪೇಟಿ ಶ್ರೀಗಳ ಪಾದಪೂಜೆ ನೆರವೇರಿಸಿ ಸಮಾಜ ಉದ್ದೇಶಿಸಿ ಮಾತನಾಡಿದರು.

ಇದೇ ವೇಳೆ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಎಲ್ಲರ ಸರ್ವಾನುಮತದಿಂದ ನಿವೃತ ಪ್ರಾಚಾರ್ಯರಾದ ಡಾ. ಸಿ.ಆರ್. ಗುಡಸಿ ಅವರನ್ನು ರಾಯಬಾಗ ತಾಲೂಕ ಪಂಚಮಸಾಲಿ 2ಎ ಮಿಸಲಾತಿ ಹೋರಾಟ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನ ಸ್ವೀಕರಿಸಿ ಮಾತನಾಡಿದ ಗುಡಸಿ ಅವರು ಸಮಾಜದ ಆಗುಹೋಗುಗಳ ಬಗ್ಗೆ ಚರ್ಚಿಸಿ, ಬೆಳವಣಿಗೆಯ ಬಗ್ಗೆ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತ ಮಲ್ಲಿಕಾರ್ಜುನ ಖಾನಗೌಡ, ಹಾರೂಗೇರಿ ನಿವೃತ್ತ ಪ್ರಾಚಾರ್ಯ ಡಾ. ಚಂದ್ರಶೇಖರ ಗುಡಿಸಿ, ಅಶೋಕ ಕೊಪ್ಪದ, ಪುರಸಭೆ ಸದಸ್ಯ ಪರಪ್ಪ ಖೇತಗೌಡರ, ಸಂಗಪ್ಪ ಜಂಬಗಿ , ಸುರೇಶ ಹೊಸಪೇಟೆ, ರಾಯಬಾಗ ತಾಲೂಕು ಹಸಿರು ಸೇನೆ ತಾಲ್ಲೂಕಾಧ್ಯಕ್ಷ ಮಲ್ಲಪ್ಪ ಅಂಗಡಿ, ನ್ಯಾಯವಾದಿ ಸುರೇಶ ಹೊಸಪೇಟಿ, ಪುರಸಭೆ ಸದಸ್ಯರಾದ ಮಹಾಂತೇಶ ಯರಡತ್ತಿ , ಕೆಂಪಣ್ಣ ಅಂಗಡಿ, ಗಜಾನನ ಕೊಕಟನೂರ, ರಮೇಶ ಖೇತಗೌಡರ, ಕೆಂಪಣ್ಣ ಮುಶಿ, ರಮೇಶ ಕಲ್ಲಾರ, ನಾಗಪ್ಪ ಹುಕ್ಕೇರಿ, ಗುತ್ತಿಗೆದಾರ ಸುರೇಶ ಜಂಬಗಿ, ಮಹಾದೇವ ಹುಕ್ಕೇರಿ, ಅಪ್ಪಾಸಾಹೇಬ ಹೊಸಪೇಟಿ, ಮಲಗೌಡ ಖೇತಗೌಡರ, ಡಾ. ಬಸವರಾಜ ಹೊಸಪೇಟೆ , ಚೆನ್ನಪ್ಪ ಕಡಕಬಾವಿ, ಮಹಾದೇವ ಮಗದುಮ, ಸಿದ್ದಪ್ಪ ಅಂಗಡಿ ಗಿರಮಲೢ ಕಲ್ಲಾರ, ರುದ್ರಪ್ಪ ಭದ್ರಶೆಟ್ಟಿ , ಷಣ್ಮುಖ ತೇರದಾಳ, ಮಲ್ಲಪ್ಪ ಯರಗಾಣಿ, ಹುಲೆಪ್ಪ ತೇಗೂರ, ಶ್ರೀಶೈಲ ಮರಡಿ, ಸಚಿನ ಮರಡಿ,ಇತರರು ಇದ್ದರು.

ಹಾರೂಗೇರಿ ಪೊಲೀಸ್ ಅಧಿಕಾರಿ ಧರೆಪ್ಪ ಚಿಕ್ಯಾಕೋಂಡಿ ಹಾಗೂ ಸಿಬ್ಬಂದಿ ವರ್ಗ ಸೂಕ್ತ ಭದ್ರತೆಗಾಗಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

Leave a Comment

Your email address will not be published. Required fields are marked *

error: Content is protected !!