ಅರಭಾವಿ ತೋಟದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ…..

Share the Post Now


ವರದಿ: ಸಂಗಮೇಶ ಹಿರೇಮಠ.



ಮುಗಳಖೋಡ: ಪಟ್ಟಣದ ಅರಭಾವಿ ಫೌಂಡೇಶನ್ ವತಿಯಿಂದ ಅರಭಾವಿ ತೋಟದಲ್ಲಿ ಇತ್ತೀಚಿಗೆ ಶಾರದಾ ವಿದ್ಯಾಪೀಠ ಎಂಬ ಹೆಸರಿನ ಗ್ರಂಥಾಲಯ ಆರಂಭಿಸಿ, ಪಕ್ಕದಲ್ಲಿ ವಿದ್ಯಾದೇವತೆಯಾದ ಶ್ರೀ ಸರಸ್ವತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಸೋಮವಾರ ಬೆಳಿಗ್ಗೆ ಪಟ್ಟಣದ ಗಣೇಶ ಮಂದಿರದಿಂದ ಶ್ರೀ ಸರಸ್ವತಿ ಮೂರ್ತಿಯನ್ನು ಹೊತ್ತ ಮೆರವಣಿಗೆಯು ಆರತಿ, ಕುಂಭ, ಸಕಲ ವಾದ್ಯ ಮೇಳದೊಂದಿಗೆ ವಿವಿಧ ಬೀದಿಗಳಲ್ಲಿ ಸಂಚರಿಸಿ ಅರಭಾವಿ ಅವರ ತೋಟ ತಲುಪಿತು.


ನಂತರ ಅಭಿಷೇಕ, ಅಲಂಕಾರ, ಪೂಜೆ ಹೀಗೆ ನಾನಾಬಗೆಯ ವಿಧಿವಿಧಾನಗಳ ಮೂಲಕ ಶಾಸ್ತ್ರೋಕ್ತವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಅರಭಾವಿ ಸಂಸ್ಥೆಯ ಅಧ್ಯಕ್ಷ ಸಂತೋಷ ಅರಭಾವಿ ಮಾತನಾಡಿ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಗೆ ಹೆಚ್ಚು ಒತ್ತು ನೀಡಬೇಕೆಂದು ಗ್ರಾಮೀಣ ಭಾಗದ ಹಾಗೂ ಪಟ್ಟಣದ ಸುತ್ತಮುತ್ತಲಿನ ಬಡ ವಿದ್ಯಾರ್ಥಿಗಳ ಓದಿಗಾಗಿ ಅರಭಾವಿ ಫೌಂಡೇಶನ್ ವತಿಯಿಂದ ಒಂದು ಗ್ರಂಥಾಲಯ ಆರಂಭಿಸಲಾಗಿದೆ. ಓದಿನ ಜೊತೆಗೆ ಧಾರ್ಮಿಕ ಭಾವ ಬೆಳೆಯಲಿ ಎಂಬ ಉದ್ದೇಶದಿಂದ ಶ್ರೀ ಸರಸ್ವತಿ ಮೂರ್ತಿಯನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಎಲ್ಲರೂ ಈ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮವನ್ನು ಶ್ರೀಮತಿ ಲಕ್ಷ್ಮೀ ಮಾರುತಿ ಅರಭಾವಿ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಮುಗಳಖೋಡ ಪಟ್ಟಣದಲ್ಲಿ ವಿದ್ಯೆಗೆ ಒತ್ತು ನೀಡುವ ಇಂತಹ ಕಾರ್ಯ ಶ್ಲಾಘನೀಯ ಎಂದು ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಲಕ್ಷ್ಮೀ ಅರಭಾವಿ, ವೈದ್ಯಾಧಿಕಾರಿ ಆರ್.ಎ.ಮೇಲಾಪೂರೆ, ಡಾ. ವಿಶಾಲಾಕ್ಷಿ, ಪಶುವೈದ್ಯ ಎಂ ಕಂಕಣವಾಡಿ, ಸಂತೋಷ ಅರಭಾವಿ, ಯಲ್ಲಾಲಿಂಗ ಗೋಕಾಕ, ಗ್ರಂಥ ಪಾಲಕ ಗುರುಣಾತ ಬೊರಗಾಂವಿ, ಯಲ್ಲಾಲಿಂಗ ಕುರಿಮಣಿ, ಶೇಖರ ನಡುವಿನಕೇರಿ, ರಾಘು ವಾಗ್ಮೋರೆ, ಗೋಪಾಲ ತೇರದಾಳ, ಅಶೋಕ ಹಳಿಂಗಳಿ, ಹಾಲಪ್ಪ ಶೇಗುಣಸಿ, ರಾಜು ಸಸಾಲಟ್ಟಿ ಸೇರಿದಂತರ ಪಟ್ಟಣದ ಕೇಂದ್ರ ಪ್ರೌಢ ಮತ್ತು ಪ್ರಾಥಮಿಕ ಶಾಲೆ ಹಾಗೂ ಯಲ್ಲಾಲಿಂಗೇಶ್ವರ ಶಾಲೆಯ ಮಕ್ಕಳು, ಗುರುಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!