ಅಂಕಲಗಿ. ೩೧- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ಇಲ್ಲಿಯ ಒಂದು ವರ್ಷ ಹನ್ನೊಂದು ತಿಂಗಳ ಪುಟ್ಟ ಪೋರಿ ತನ್ನಲ್ಲಿಯ ವಿಶೇಷ ಕೌಶಲದಿಂದ ಇಂಡಿಯಾ ಬುಕ್ ಅಪ್ ರೆಕಾರ್ಡ್ಸ್ ೨೦೨೩ ನಲ್ಲಿ ಹೆಸರು ದಾಖಲಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. ಈ. ಸಾಧಕ ಪೋರಿ
ಗೋಕಾಕ ತಾಲೂಕಿನ ಉರಬಿನಹಟ್ಟಿ ಗ್ರಾಮದ ಸ್ನೇಹಾ ಮತ್ತು ನಾಗರಾಜ ಹೊಳೆಯಾಚಿ ದಂಪತಿಗಳ ಸುಪುತ್ರಿ
.
ಇಂಗ್ಲೀಷಿನಲ್ಲಿಯ ವರ್ಣಮಾಲೆ, ವಾರದ ದಿನಗಳು ಮತ್ತು ತಿಂಗಳುಗಳು, ೫ ಮಕ್ಕಳ ಹಾಡುಗಳು, ಹಲವಾರು ಪ್ರಾಣಿ, ಪಕ್ಷಿಗಳ ಧ್ವನಿ ಅನುಕರಣೆ, ಕನ್ನಡ ಸ್ವರಗಳು, ೧೪ ರಾಜಧಾನಿಗಳು, ಗುರು ರಾಘವೇಂದ್ರ ಸ್ತೋತ್ರಗಳು, ೬೦ ಕ್ಕಿಂತ. ಹೆಚ್ಚು ಮನೆ ಬಳಕೆ ವಸ್ತುಗಳ ಗುರುತಿಸುವದು, ಮಹಾ ಭಾರತದ ೪ ಪ್ರಮುಖ ಪಾತ್ರಗಳ ಅಭಿನಯ ಸೇರಿದಂತೆ ಅಗಾಧ ಸಾಧನೆ ತನ್ನದಾಗಿಸಿದ್ದಾಳೆ.
ಇವಳ. ಈ. ಸಾಧನೆಯ. ಕುರಿತು ಇಂಡಿಯಾ ಬುಕ್ ಅಪ್ ರೆಕಾರ್ಡ್ಸ್ ನ ಚೀಫ್ ಅಡಿಟರ್ ಬಿಶ್ವರೂಪ ರಾಯ್ ಚೌಧರಿ ವೈಷ್ಣವಿ ಗೆ ಚಿನ್ನದ ಪದಕ ಮತ್ತು ಪ್ರಮಾಣ ಪತ್ರ. ನೀಡಿ ಗೌರವಿಸಿದ್ದಾರೆ. ಇವಳ. ಈ ಸಾಧನೆಗೆ ನಾಡಿನ ಎಲ್ಲೆಡೆ ಹರ್ಷ ವ್ಯಕ್ತವಾಗಿದೆ.