ಅರಬಾಂವಿ: ಮತಕ್ಷೇತ್ರದ ನಾಗನೂರಿನಲ್ಲಿ 2 ಕೋಟಿ 75 ಲಕ್ಶದ ವೆಚ್ಚದ ಬ್ರಿಜ್ ಕಮ್ ಬ್ಯಾರೇಜ ಭೂಮಿ ಪೂಜೆಯನ್ನು ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ನೆರವೇರಿಸಿದರು .
ಸುಮಾರು 5 ವರ್ಷಗಳ ನಿರಂತರ ಪರಿಶ್ರಮದಿಂದ ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆ ನೆರವೇರಿಸಿ ಲಕ್ಷಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು ಬ್ರಿಜ್ ಕಮ್ ಬ್ಯಾರೇಜ ಆಗಬೇಕೆಂಬುದು ಅನೇಕ ವರ್ಷದ ಬೇಡಿಕೆಯಾಗಿತ್ತು ಇವತ್ತು ನಾವು ಅನುದಾನ ಮಂಜೂರು ಮಾಡಿ ಭೂಮಿ ಪೂಜೆ ನೆರವೇರಿಸಿದ್ದೇವೆ ಅತೀ ಶೀಘ್ರದಲ್ಲಿ ಕೆಲಸ ಪೂರ್ಣಗೊಂಡು ಈ ಭಾಗದ ರೈತರಿಗೆ ,ಮಕ್ಕಳಿಗೆ ,ಯುವಕರಿಗೆ ,ಜನರಿಗೆ ಅನುಕೂಲವಾಗವುದು ,
ಸರ್ಕಾರ ಯಾವುದೇ ಇರಲಿ ನಿಮಗೆ ಬರಬೇಕಾದ ಅನುದಾನ ಸೌಲಭ್ಯ ವನ್ನು ನಿಮಗೆ ನೀಡುವಲ್ಲಿ ಪ್ರಯತ್ನ ಮಾಡುತ್ತೇನೆ ನಿಮ್ಮಂತ ಮತದಾರರು ಸಿಕ್ಕಿದ್ದು ನಮ್ಮ ಪುಣ್ಯ
ಮಳೆಯ ಅಭಾವದಿಂದ ರೈತಾಪಿ ಜನರಿಗೆ ಸಂಕಷ್ಟವಾಗುವ ಸಮಯ ಎದುರಾಗಬಹುದು. ಕಳೆದ ಜೂನ, ಜುಲೈ ಮತ್ತು ಅಗಷ್ಟ ತಿಂಗಳಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ, ಇದರಿಂದ ಹಿಡಕಲ್ ಜಲಾಶಯದಲ್ಲಿ ಪ್ರಸ್ತುತ 33 ಟಿ.ಎಂ.ಸಿ ನೀರು ಮಾತ್ರ ಸಂಗ್ರಹ ಇದೆ. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಜನರಿಗೆ ಬರಗಾಲದ ಛಾಯೆ ತಿಳಿದಿರಲಿಲ್ಲ, ಆದರೀಗ ಮಳೆಯ ತೀವ್ರ ಅಭಾವದಿಂದ ಕುಡಿಯುವ ನೀರಿಗೂ ಸಹ ಸಂಚಕಾರ ಬಂದಿದೆ. ಹಿಡಕಲ್ ಜಲಾಶಯದಿಂದ ಬೀಡುವ ನೀರನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು.
ಅನಾವಶ್ಯಕವಾಗಿ ನೀರನ್ನು ಪೋಲು ಮಾಡಬೇಡಿ ಎಂದು ರೈತರಲ್ಲಿ ಕೋರಿಕೊಂಡರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದ ಮತದಾರರು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದ 71 ಸಾವಿರ ಮತಗಳ ಮುನ್ನಡೆ ನೀಡುವ ಮೂಲಕ ರಾಜ್ಯದಲ್ಲಿ ದಾಖಲೆಯ ನಾಲ್ಕನೇ ಸ್ಥಾನ ಮುನ್ನಡೆ ನೀಡಿದ್ದೀರಿ. ಚುನಾವಣೆ ಪ್ರಚಾರದಲ್ಲಿ ಭಾಗಿಯಾಗದಿದ್ದರೂ ಸ್ಥಳೀಯ ಎಲ್ಲ ಸಮಾಜಗಳ ಮುಖಂಡರು, ಪಕ್ಷದ ಕಾರ್ಯಕರ್ತರು ನನ್ನ ಪರವಾಗಿ ಶ್ರಮಿಸಿ ಆಶೀರ್ವಾದ ಮಾಡಿದ್ದೀರಿ. ಅದಕ್ಕಾಗಿ ನಮ್ಮ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳಿಗೆ ಸದಾ ಚಿರಋಣಿಯಾಗಿರುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.