ಬೆಳಗಾವಿ.ರಾಯಬಾಗ ತಾಲೂಕಿನ ಮೊರಬ ಗ್ರಾಮದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 110ಕೆವಿ ಉಪ ಕೇಂದ್ರದಲ್ಲಿ ಮಂಗಳವಾರ ದಿನಾಂಕ 12ರಂದು ಉಪಕರಣಗಳ ಹಾಗೂ ಪರಿವರ್ತಕ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಗೊಳ್ಳಲಿರುವ ಕಾರಣ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಮೊರಬದಿಂದ ಸರಬರಾಜು ಆಗುವ 11ಕೆವ್ಹಿ, ಎಫ-1 ಭಿರಡಿ ತೋಟ, ಎಫ2 ಪಡಲಾಳೆ ತೋಟ, ಎಫ3 ಬಾನೆ ಸರ್ಕಾರ ತೋಟ, ಎಫ4 ಪಟ್ಟಣದಾರ ತೋಟ, ಎಫ5 ಬಂತೆ ತೋಟ, ಎಫ6 ಮಗದುಮ ತೋಟ, ಎಫ8 ದೇವರಿಸಿ ತೋಟ, ಎಫ9 ಶಾಂಡಗೆ ತೋಟ, ಎಫ10 ಸಪ್ತಸಾಗರ ತೋಟ, ಎಫ11 ಮೊರಬ ಎನ್.ಜೆ.ವಾಯ, ಹಾಗೂ ಎಫ12 ಕದಮವಾಡಿ
ಮಾರ್ಗಗಳಿಗೆ ಮುಂಜಾನೆ 9ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಕುಡಚಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಯಲ್ಪಾರಟ್ಟಿ 110ಕೆವಿ ಎಸ್.ಓ. ಸೋಮಶೇಖರ ಕಾಂಬಳೆ ತಿಳಿಸಿದ್ದಾರೆ.