ಬೆಳಗಾವಿ. ಕಾಗವಾಡ :ವಿದ್ಯಾರ್ಥಿಗಳ ಪಠ್ಯ ಪೂರಕ ರಸಪ್ರಶ್ನೆ ಸ್ಫರ್ಧೆಯು ಮೌಲ್ಯ ಮಾಪನದ ಒಂದು ರೂಪ. ಸಮಗ್ರವಾಗಿ ಓದಿದ ವಿಷಯಗಳನ್ನು ವಸ್ತುನಿಷ್ಠವಾಗಿ ಪುನರಾವರ್ತನೆ ಮಾಡುವ ಕ್ವಿಜ್ ಸ್ಫರ್ಧೆಗಳು ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತವೆ ಎಂದು ಪ್ರೊ.ಎನ್. ಬಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶನಿವಾರ ದಿನಾಂಕ 9 ರಂದು ಪ್ರತಿಷ್ಠಿತ ಕೆ.ಎಲ್.ಇ. ಪದವಿ ಮಹಾವಿದ್ಯಾಲಯ ಶಿರಗುಪ್ಪಿಯಲ್ಲಿ ಐ.ಕ್ಯೂ.ಎ.ಸಿ.ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಕಂಪನಿ ಆಡಳಿತ” ವಿಷಯದ ಕುರಿತು ಪ್ರೊ.ಎನ್. ಬಿ.ಪಾಟೀಲ ಅವರು ಸಂಯೋಜನೆ ಮಾಡಿದ್ದ ಬಿ.ಕಾಂ.ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಕಂಪನಿ ಆಡಳಿತ” ವಿಷಯದ ಕುರಿತು “ರಸಪ್ರಶ್ನೆ ಸ್ಫರ್ಧೆಯಲ್ಲಿ” ವಿಜೇತರಾದ ವಿದ್ಯಾರ್ಥಿಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಇಂದು ಈ ಸ್ಪರ್ಧಾ ಜಗತ್ತಿನಲ್ಲಿ ಜ್ಞಾನವನ್ನು ಬೇರೆ ಬೇರೆ ಮೂಲಗಳಿಂದ ಪಡೆಯಲು ಸಾಧ್ಯವಿದೆ. ಗಳಿಸಿದ ಜ್ಞಾನವನ್ನು ಬುದ್ದಿಶಕ್ತಿಯಿಂದ ಶಾಶ್ವತವಾಗಿ ನೀವು ನೆನಪಿನಲ್ಲಿ ಇರಿಸಿಕೊಳ್ಳಲು ಸಾಧ್ಯ. ರಸಪ್ರಶ್ನೆ ಸ್ಫರ್ಧೆಗಳು ನಿಮ್ಮ ಓದಿಗೆ ಪುಷ್ಟಿ ನೀಡುತ್ತವೆ ಮಾತ್ರವಲ್ಲ ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತವೆ ಎಂದು ಹೇಳಿದರು.
ಇದಕ್ಕೂ ಮೊದಲು ಈ ರಸಪ್ರಶ್ನೆ ಸ್ಫರ್ಧೆಯಲ್ಲಿ ಒಟ್ಟು 7 ತಂಡಗಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕ್ವಿಜ್ ಸ್ಫರ್ಧೆ ಯಶಸ್ವಿಯಾಗಲು ಸಹಕರಿಸಿದರು. ನಿರಂತರ 2 ಗಂಟೆಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಹಲವು ವಿಶೇಷ ಸುತ್ತುಗಳನ್ನು ಮಾಡಿ ಸುವ್ಯವಸ್ಥಿತ ವಾಗಿ ಪಿ.ಪಿ.ಟಿ ಮೂಲಕ ಸ್ಪರ್ಧಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಪ್ರೊ.ಎನ್. ಬಿ.ಪಾಟೀಲ ಅವರು ಸಂಯೋಜನೆ ಮಾಡಿ ಸಂಘಟಿಸಿದ ಈ ರಸಪ್ರಶ್ನೆ ಸ್ಫರ್ಧೆಯನ್ನು ಚಿಕ್ಕೋಡಿಯ ಪ್ರತಿಷ್ಠಿತ ಬಸವ ಪ್ರಭು ಕೋರೆ ಮಹಾವಿದ್ಯಾಲಯದ ಬಿ.ಕಾಂ. 6 ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ಪ್ರೊ.ಎನ್. ಬಿ.ಪಾಟೀಲ ಗುರುಗಳ ಪ್ರತಿಭಾವಂತ ವಿದ್ಯಾರ್ಥಿನಿಯರಾದ
ಕು.ಅಂಕಿತಾ ಮಾಳಿ,ಕು.ದೀಪಾ ಪಾಟೀಲ, ಕು.ಜ್ಞಾನೇಶ್ವರಿ ಪೇಟಕರ ಕು.ಸಾಕ್ಷಿ ಜಾಧವ,ಕು.ಸೌಮ್ಯ ಬುರುಸೆ, ಹಾಗೂ ಕು.ಸುಜಾತಾ ಬರಗಾಲೆ ರಸಪ್ರಶ್ನೆ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಗೌರವ ಉಪಸ್ಥಿತ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕನ್ನಡ ಪ್ರಾಧ್ಯಾಪಕರು ಸಾಹಿತಿ ಡಾ.ಜಯವೀರ ಎ.ಕೆ.ಅವರು ಮಾತನಾಡಿ ಈ ರಸಪ್ರಶ್ನೆ ಸ್ಫರ್ಧೆಗಳು ಊಟಕ್ಕೆ ಉಪ್ಪಿನಕಾಯಿ ಇದ್ದಂತೆ. ಆಳವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸ್ವಲ್ಪ ಬೇಸರಿಕೆ ಕಳೆದುಕೊಳ್ಳಲು ಈ ರಸಪ್ರಶ್ನೆ ಸ್ಫರ್ಧೆಯು ಏಕತಾನತೆ ಹೋಗಲಾಡಿಸಿ ಮತ್ತಷ್ಟು ಕ್ರಿಯಾಶೀಲ ಹಾಗೂ ನಿರಂತರ ಉತ್ಸಹಿಗಳನ್ನಾಗಿ ಮಾಡುತ್ತದೆ. ಜಯಕ್ಕಿಂತ ಸ್ಫರ್ಧೆ ಮುಖ್ಯ ಎಂಬ ಚಿಂತನೆ. ಹಾಗೂ ಸಕಾರಾತ್ಮಕವಾಗಿ ಆಲೋಚನೆಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಭವಿಷ್ಯದಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಾಧ್ಯ ಎಂದು ನುಡಿದರು. ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ ಅವರು ನಮ್ಮ ಮಹಾವಿದ್ಯಾಲಯದ ಉಪನ್ಯಾಸಕರು ವಾಣಿಜ್ಯ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಎನ್. ಬಿ.ಪಾಟೀಲ ಅವರ ಕ್ರಿಯಾಶೀಲತೆ ಮೆಚ್ಚುವಂತಹದು. ಅವರಿಂದ ನಾವೆಲ್ಲರೂ ಕಲಿಯುವುದು ಬಹಳ ಇದೆ.ನಿರಂತರ ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ಮಾಡಬೇಕೆಂದು ಹಂಬಲಿಸುವ ಪ್ರೊ. ಎನ್. ಬಿ.ಪಾಟೀಲ ಸರ್ ಅವರು ನಮ್ಮ ಮಹಾವಿದ್ಯಾಲಯಕ್ಕೆ ಅತಿಥಿ ಉಪನ್ಯಾಸಕರಾಗಿ ಪ್ರಾಪ್ತವಾಗಿರುವುದು ನಿಮ್ಮೆಲ್ಲರ ಅದೃಷ್ಟ ಚೆನ್ನಾಗಿದೆ ಎಂದು ಅಭಿಮಾನದಿಂದ ತಮ್ಮ ಅಧ್ಯಕ್ಷೀಯ ಆಶಯ ನುಡಿಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದ್ದ ಪ್ರೊ.ಎನ್. ಬಿ.ಪಾಟೀಲ ಅವರನ್ನು ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ ಅವರು ಒಂದು ಸಸಿ ನೀಡಿ ಸತ್ಕರಿಸಿ ಗೌರವಿಸಿದರು. ಪ್ರಥಮ, ದ್ವಿತೀಯ, ಹಾಗೂ ತೃತೀಯ ಸ್ಥಾನ ಪಡೆದ ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನಗಳನ್ನು ವೇದಿಕೆ ಮೇಲಿನ ಗಣ್ಯರು ವಿತರಿಸಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕು.ಸಮೀಕ್ಷಾ ಶಿರಗುಪ್ಪೆ ಸ್ವಾಗತಿಸಿದರು. ಕು.ಬೀರಪ್ಪ ಯಂಗಾರೆ ನಿರೂಪಿಸಿದರು. ಐ.ಕ್ಯೂ.ಎ.ಸಿ ಅಧ್ಯಕ್ಷೆ ಪ್ರೊ.ರಾಧಿಕಾ ಯಾದವ ವಂದಿಸಿದರು.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*
.