ಬೆಳಗಾವಿ.ರಾಯಬಾಗ: ಸಮೀಪದ ಕಬ್ಬೂರ ಹೊರವಲಯದ ಬೆಳಗಲಿ ತೋಟದ ನಿವಾಸಿಗಳು, ಶರಣಜೀವಿ, ಪ್ರಸ್ತುತ ರಾಯಬಾಗ ಪಟ್ಟಣದ ಎಚ್.ಬಿ.ಚೌಗಲೆ ಪದವಿ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಚಿದಾನಂದ ಯಲ್ಲಪ್ಪ ಬೆಳಗಲಿ ಅವರು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿಯಾಗಿ “ಪಂಪನ ಕಾವ್ಯಗಳಲ್ಲಿ ಸ್ತ್ರೀ ಪಾತ್ರಗಳ ವಿಶೇಷ ಅಧ್ಯಯನ” ಎಂಬ ಸಂಶೋಧನ ಸಂಪ್ರಬಂಧ ಮಂಡಿಸಿ ಪ್ರಸಕ್ತ ಸಾಲಿನಲ್ಲಿ ಇತ್ತೀಚೆಗೆ ( ಪಿ.ಎಚ್.ಡಿ.) ಡಾಕ್ಟರೇಟ್ ಪದವಿ ಪಡೆದರು. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಭಾಷಾ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು,ಸಂಶೋಧನ ಮಾರ್ಗದರ್ಶಕರಾದ ಪ್ರೊ.ಎಸ್.ಎಂ.ಗಂಗಾಧರಯ್ಯ ಶ್ರೀ ಚಿದಾನಂದ ಬೆಳಗಲಿ ಅವರಿಗೆ ಮಾರ್ಗದರ್ಶನ ಮಾಡಿದ್ದರು.
ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*