ವಿಜಯಪುರ : ಸದಾ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿರುವ ವಿಜಯಪುರ ಬಿಜೆಪಿ ಶಾಸಕ ಹಾಗೂ ಮಾಜಿ ಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್ ವಿಭಿನ್ನ ಕೆಲಸದಿಂದ ಗಮನಸೆಳೆದಿದ್ದಾರೆ.
ಯಾವಾಗಲೂ ಹಿಂದೂ ಧರ್ಮದ ಕಾರ್ಯಕ್ಕೆ ಪ್ರೋತ್ಸಾಹ ನೀಡುವ ಯತ್ನಾಳ್ ಈ ಬಾರಿ ವಿಜಯಪುರ ನಗರದ ಗಣೇಶ ಮಂಡಲಕ್ಕೆ ವೈಯಕ್ತಿಕವಾಗಿ ದೇಣಿಗೆ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ವಿಜಯಪುರದ ಪ್ರತಿ ಗಜಾನನ_ಮಂಡಳಿಗಳಿಗೆ ಸ್ವಾತಂತ್ರ ವೀರ ಸಾವರ್ಕರ್ ರವರ ಭಾವಚಿತ್ರ ಹಾಗೂ ತಲಾ ₹ 5,000 ದೇಣಿಗೆ ನಮ್ಮ ವತಿಯಿಂದ ನೀಡಲಾಗುವುದು .
ಗಜಾನನ ಮಂಡಳಿಗಳ ಪದಾಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗಣೇಶನ ದೇಣಿಗೆಗಾಗಿ ಶಾಸಕರ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ.
ನಿಮ್ಮ ನಿಮ್ಮ ಪೆಂಡಾಲ್ ಗಳಲ್ಲಿಯೇ ಬಂದು ನಮ್ಮ ಸ್ವಾಮಿ ವಿವೇಕಾನಂದಸೇನೆಯ ಪದಾಧಿಕಾರಿಗಳು ಪ್ರತಿ ಗಣೇಶ ಮಂಡಳಿಗೆ ತಲಾ ₹5,000 ದೇಣಿಗೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಯಾವ ಅನುಮತಿಗಳಿಗೂ ಕಚೇರಿಯಿಂದ, ಕಚೇರಿಗೆ ಅಲೆದಾಡುವ ಅವಶ್ಯಕತೆಯಿಲ್ಲ, ಅಧಿಕಾರಿಗಳೇ ನಿಮ್ಮ ಬಳಿ ಬಂದು ಅನುಮತಿ ನೀಡುತ್ತಾರೆ. ಯಾವುದೇ ಅಧಿಕಾರಿ ಅನುಮತಿಗೆ ಕಿರುಕುಳ ನೀಡಿದರೆ ನನ್ನ ಕಚೇರಿಯ ಗಮನಕ್ಕೆ ತರಬೇಕು ಎಂದು ಯತ್ನಾಳ್ ಟ್ವಿಟ್ ಮಾಡಿದ್ದಾರೆ.