ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ಕಬಡ್ಡಿ ಪಂದ್ಯಾವಳಿಯಲ್ಲಿ ರಾಯಬಾಗ ತಾಲೂಕು ಮಟ್ಟದಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮುಗಳಖೋಡ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪಟ್ಟಣದ ಹಿರಿಯರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಉಪಾಧ್ಯಕ್ಷರಾದ ಶ್ರೀ ಹನುಮಸಾಬ ನಾಯಿಕ ಅವರು ವಿದ್ಯಾರ್ಥಿಗಳಿಗೆ ಟಿ-ಶರ್ಟ್ ನೀಡುವುದರ ಮುಖಾಂತರ ಪ್ರೋತ್ಸಾಹಿಸಿ ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿಯೂ ಗೆಲುವು ಸಾಧಿಸಿ ನಮ್ಮ ಮುಗಳಖೋಡ ಪಟ್ಟಣದ ಹೆಸರನ್ನು ರಾಜ್ಯ ಹಾಗೂ ದೇಶದುದ್ದಕ್ಕೂ ಪಸರಿಸುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಶೋಕ ಕೊಪ್ಪದ, ರಾಜಕುಮಾರ ನಾಯಕ, ಸಂಗಮೇಶ ಹಿರೇಮಠ, ಅಂಬರೀಶ್ ದೇಸಾಯಿ, ಪಾಂಡುರಂಗ ನಾಯಕ, ನಿವೃತ್ತ ಶಿಕ್ಷಕರಾದ ಲಕ್ಷ್ಮಣ ಮುನ್ಯಾಳ, ಮುಖ್ಯೋಪಾಧ್ಯಾಯ ವಿರುಪಾಕ್ಷಯ್ಯಾ ಕರಡಿ, ಶಿವಾನಂದ ಹಂಚಿನಾಳ, ದೈಹಿಕ ಶಿಕ್ಷಕ ಬಸವರಾಜ ಬಂಡಿಗಣಿ, ಮಾನಿಂಗ ಕೊಪ್ಪದ, ಎಸ್.ಎಸ್.ಕುಲಿಗೋಡ, ಬಿ.ವ್ಹಿ.ಹಟ್ಟಿಮನಿ ಹಾಗೂ ಪ್ರ ಶಿಕ್ಷಣಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.