ಬೆನಕನ ಅಮವಾಸ್ಯೆ ದಿನ ಶ್ರೀ ಮಠಕ್ಕೆ ಹರಿದು ಬಂದ ಭಕ್ತ ಸಾಗರ….
ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ : ಸುಕ್ಷೇತ್ರ ಮುಗುಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಮಹಾಪ್ರಭುಗಳ
ಕರ್ತೃ ಗದ್ದುಗೆ ದರ್ಶನ ಆಶೀರ್ವಾದ ಪಡೆಯಲು ಪವಿತ್ರ ಶ್ರಾವಣ ಮಾಸದ ಪ್ರಾರಂಭ ದಿನದಿಂದಲು ನಾಡಿನ ಹೊರನಾಡಿನ ಲಕ್ಷಾಂತರ ಭಕ್ತರು ಪ್ರತಿ ನಿತ್ಯ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಗುರುಗಳ ಗದ್ದುಗೆಗೆ ಅಭಿಷೇಕ, ಮಹಾರುದ್ರಾಭಿಷೇಕ, ಹಾಗೂ ವಿಶೇಷ ಪೂಜಾ ವಿಧಿ ವಿಧಾನಗಳನ್ನು ಹಮ್ಮಿಕೊಂಡ ತಮ್ಮ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆಯುತ್ತಿದ್ದರು.
ಅದರಂತೆ ಶ್ರಾವಣ ಮಾಸದ ಕೊನೆಯ ದಿನ ಶುಕ್ರವಾರ ಬೆನಕನ ಅಮವಾಸ್ಯೆ ನಿಮಿತ್ಯ ಸಾವಿರಾರು ಭಕ್ತರು ಬೆಳಗ್ಗೆ 10 ಘಂಟೆಗೆ ಪರಮ ಪೂಜ್ಯ ಶ್ರೀ ಡಾ. ಮುರುಘರಾಜೇಂದ್ರ ಶ್ರೀಗಳಿಗೆ ಸುವರ್ಣ ಕಿರೀಟ ಧಾರಣೆ ಹಾಗೂ ಪಾದಪೂಜೆ ಮಾಡಿ ಗುರುಗಳ ಆಶೀರ್ವಾದ ಪಡೆದರು.
ನಂತರ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಕರ್ನಾಟಕ ಒಳಗೊಂಡು ನೆರೆಯ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ , ತೆಲಂಗಾಣ, ಆಂಧ್ರ ಸೇರಿದಂತೆ ಸಾವಿರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.