ವರದಿ :ಸಂಜೀವ್ ಬ್ಯಾಕುಡೆ.ಕುಡಚಿ
ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಲಕ್ಷ್ಮೀದೇವಿ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಟ್ಟಟ್ಟಿ ವಲಯ ಹಾಗೂ ಗ್ರಾಮ ಪಂಚಾಯತ ಇವರ ಸಂಯುಕ್ತಾಶ್ರಯದಲ್ಲಿ ಧಾರ್ಮಿಕ ಸಭೆ ಹಾಗೂ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದರು.
ಸಂಘದ ಪ್ರಮುಖರಿಂದ ವರಮಹಾಲಕ್ಷ್ಮಿ ಪೂಜೆ, ಮಹಿಳೆಯರಿಗೆ ಉಡಿತುಂಬುವುದು ನಡೆಯಿತು.
ನಂತರ ವೇದಿಕೆ ಕಾರ್ಯಕ್ರಮವನ್ನು ಅಭಿನವ ಕಲ್ಮೇಶ್ವರ ಮಹಾರಾಜರು, ವೇದಿಕೆ ಗಣ್ಯರಿಂದ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ನಂತರ ಕ್ಷೇತ್ರ ಯೋಜನಾಧಿಕಾರಿ ಕಿರಣ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ 45ವರ್ಷಗಳ ಹಿಂದೆ ಪ್ರಾರಂಭವಾದ ಸಂಘ 30ಜಿಲ್ಲೆಗಳಲ್ಲಿ 6ಲಕ್ಷ ಸಂಘಗಳ ಮೂಲಕ 60ಲಕ್ಷ ಸದಸ್ಯರನ್ನು ಹೊಂದಿದೆ ಒಂದು ಹಳ್ಳಿಯಿಂದ ಬೆಳೆದ ಸಂಘ ಮಹಿಳೆಯರ ಒಕ್ಕಟ್ಟಿನ ಕಲ್ಪನೆ ಕೇವಲ 10ರೂ ಚಿಕ್ಕ ಉಳಿತಾಯದೊಂದಿಗೆ ಉಳಿತಾಯ ಕಲ್ಪನೆಯೊಂದಿಗೆ ಸಂಘ ಬೆಳೆದು ಆರ್ಥಿಕವಾಗಿ ಸಬಲರನ್ನಾಗಿ ಮನೆಮನೆಗೆ ಆರ್ಥಿಕ ಸ್ವಾತಂತ್ರ್ಯ ನೀಡುವ ಸಂಘ ಯಾವುದಾದರೂ ಇದ್ದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕಾಮಧೇನು ಆಗಿ ನಿಂತು ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡು ಆರ್ಥಿಕವಾಗಿ ಸಬಲರನ್ನಾಗಿಸಿದೆ ಜೊತೆಗೆ ಸಾಮುದಾಯಿಕ ಹಾಗೂ ಆರೋಗ್ಯ ಸಹಾಯ ನೀಡುವ ಮೂಲಕ ಸಂಘ ಕಾಯಕಲ್ಪವಾಗಿದೆ
ಹಲವರಿಗೆ ಉದ್ಯೋಗ ನೀಡುವ ಕಾರ್ಯ ಸಂಘ ಮಾಡಿದೆ ಎಂದರು.
ನಂತರ ಮುಖ್ಯ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಮಾತನಾಡಿ ರಾಜ್ಯದ 30ಜಿಲ್ಲೆಯ ಪ್ರತಿ ಗ್ರಾಮದ ಬಡ, ನಿರ್ಗತಿಕ ಮಹಿಳೆಯ ಕುಟುಂಬವನ್ನು ಆರ್ಥಿಕ ಸ್ವಾತಂತ್ರ್ಯ ಕಲ್ಪಿಸುವ ಮೂಲಕ ನಾವು ಬೆಳೆಯುವುದರೊಂದಿಗೆ ಇತರರನ್ನು ತೆಗೆದುಕೊಂಡು ಬೆಳೆಯುವುದು ಸಂಘದ ಯೋಜನೆಯಾಗಿದೆ ಕೇವಲ ಸಾಲ ಮಾತ್ರ ನೀಡದೆ ಆರ್ಥಿಕವಾಗಿ ಕುಗ್ಗಿಸುವ ಕುಟುಂಬಕ್ಕೆ ಆರೋಗ್ಯ ಆಸರೆ, ಪಿಂಚಣಿ ಇತರ ವಿವಿಧ ಸಹಾಯ ಯೋಜನೆಗಳನ್ನು ನೀಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖರಾಗಿದ್ದಾರೆ ಎಂದರು.
ಗಣ್ಯರಾದ ಸಂಜೀವಕುಮಾರ ಬಾನೆ ಮಾತನಾಡಿದರೆ,
ಅಭಿನವ ಕಲ್ಮೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.
ಇದೆ ಸಮಯದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದವರನ್ನು ಸತ್ಕರಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ನಾಯಿಕ, ಉಪಾಧ್ಯಕ್ಷ ಶಿವಾನಂದ ಹೆಗಡೆ, ಅಜೀತ ಹೆಗಡೆ, ಅನಿಲ ದೇಸಾಯಿ, ಬಾಬು ನಿಂಗನೂರೆ, ಶಿವಾನಂದ ಲಖ್ಖನಗಾಂವ, ಯೋಜನೆಯ ಸೂಪರ್ವೈಸರ್ ಹಾಗೂ ಪದಾಧಿಕಾರಿಗಳು ಮಹಿಳೆಯರು ಭಾಗಿಯಾಗಿದ್ದರು.