ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಶ್ರೀ ಕಾಳಿಕಾದೇವಿ, ಮೌನೇಶ್ವರ ಮಂದಿರ ಹಾಗೂ ಉಪ ತಹಶೀಲ್ದಾರ್ ನಾಡ ಕಚೇರಿಯಲ್ಲಿ ವಿಶ್ವ ಶಿಲ್ಪಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.
ಸಮಾಜದ ಹಿರಿಯರಾದ ಕಾಳಪ್ಪ ಸುತಾರ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಪುರಾಣಗಳ ಪ್ರಕಾರ, ವಿಶ್ವಕರ್ಮರು ವಿಶ್ವದ ಮೊದಲ ವಾಸ್ತುಶಿಲ್ಪಿ ಮತ್ತು ಎಂಜಿನಿಯರ ಆಗಿದ್ದಾರೆ. ವಿಶ್ವಕರ್ಮರು ಸ್ವರ್ಗ ಲೋಕ, ಪುಷ್ಪಕ ವಿಮಾನ, ದ್ವಾರಕಾ ನಗರಿ, ಯಮಪುರಿ, ಕುಬೇರಪುರಿ ಸೇರಿ ಇನ್ನೂ ಹಲವು ಲೋಕಗಳನ್ನು ನಿರ್ಮಿಸಿದವರು ಎಂದು ಪುರಾಣ ಪುಣ್ಯ ಕಥೆಗಳಿಂದ ತಿಳಿದುಬಂದಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ವಾಯ.ಕೆ.ಹೆಳವರ, ಡಾ.ಸಚಿನ ಮನಗುತ್ತಿ, ಹಿರಿಯರಾದ ಕಾಳಪ್ಪ ಸುತಾರ, ಅಣ್ಣಪ್ಪ ಸುತಾರ, ರವೀಂದ್ರ ಪೋತದಾರ, ವಸಂತ ಪೋತದಾರ, ರವಿ ಸುತಾರ, ಮೌನೇಶ ಸುತಾರ, ಸುನೀಲ ಪೋತದಾರ, ಚೇತನ ಸುತಾರ, ಶಿವಕುಮಾರ ಸನದಿ, ಪ್ರಕಾಶ ಕಾಂಬಳೆ ಹಾಗೂ ಇತರರು ಉಪಸ್ಥಿತರಿದ್ದರು.