ಗಣನಾಯಕನೆ ಬಾ

Share the Post Now

ಗೌರಿ ಗಣೇಶನೇ ನಮ್ಮನ್ನು ಗುಣಪತಿಗಳನ್ನಾಗಿ ಮಾಡಲು ಬಾ
ಮೋದಕ ಪ್ರಿಯನೇ ನಮ್ಮಲ್ಲಿ ಹುದುಗಿರುವ ಮತ್ಸರವನ್ನು ಮಟ್ಟ ಹಾಕಲು ಬಾ.


ಮೂಷಿಕ ವಾಹನ ಸಾರಥಿಯೇ ನಮ್ಮ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸಲು ಬಾ
ಗೌರಿ ಸುತನೆ ನಮ್ಮ ಗರ್ವದ ಬಂಡೆಗಲ್ಲನ್ನು ಸೀಳು ಬಾ
ವಿಘ್ನ ನಿವಾರಕನೆ ನಮ್ಮಲ್ಲಿರುವ ವೈರುಧ್ಯ ವೈಷಮ್ಯವನ್ನು ಶಮನಗೊಳಿಸಲು ಬಾ
ಪಾರ್ವತಿ ಸುತನೆ ಸಕಲ ಭಕ್ತ ಗಣದಿಂದ ಪೂಜಿಪನೆ ನಮ್ಮ ಕಷ್ಟ ಕರಗಿಸಿ ಮೋಕ್ಷದ ದಾರಿಗೆ ದೀಪವಾಗು ಬಾ
ಗಣನಾಯಕನೆ ನಮ್ಮ ಕಾಯಕ ನಿಷ್ಠೆಯ ಗಟ್ಟಿಗೊಳಿಸಲು ಬಾ.

*ಕವಿ:ಡಾ.ಜಯವೀರ ಎ.ಕೆ*.
*ಕನ್ನಡ ಪ್ರಾಧ್ಯಾಪಕರು*
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!