ಹಾರೂಗೇರಿ : ಚಂದ್ರಯಾನ ಪರಿಕಲ್ಪನೆಯಲ್ಲಿ ಮೂಡಿಬಂದ ಗಣಪ

Share the Post Now

ರಾಯಬಾಗ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ISRO ) ಚಂದ್ರಯಾನ – ೦೩ ರ ಯಶಸ್ಸು ಇಡೀ ವಿಶ್ವವೇ ಸಂಭ್ರಮ ಪಡುವಂತೆ ಮಾಡಿದೆ. ಸಧ್ಯ ಇದೇ ಪರಿಕಲ್ಪನೆಯಲ್ಲಿ ಗಣೇಶ ಮೂರ್ತಿ ನಿರ್ಮಾಣವಾಗಿದ್ದು ಎಲ್ಲರ ಗಮನ ಸೆಳೆದಿದೆ.

ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ನಲ್ಲಿರುವ ಎಸ್.ಎಂ.ನಾರಗೊಂಡ ಸಿಬಿಎಸ್ ಸಿ ಇಂಟನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣಪತಿ ಮೂರ್ತಿ ಚಂದ್ರಯಾನ – ೦೩ ರ ಪರಿಕಲ್ಪನೆ ಸಾರುತ್ತಿದೆ.

ಶಾಲೆಯ ಶಿಕ್ಷಕ ನಾಗೇಶ ಗುಮಾಸ್ತಿಯವರ ಕಲೆಯಲ್ಲಿ ಮೂಡಿಬಂದ ಈ ವಿಶಿಷ್ಟ ವಿನಾಯಕನ ಮೂರ್ತಿ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ಕುರಿತು ಹೆಚ್ಚು ಆಸಕ್ತಿ ಮೂಡಿಸುವಂತೆ ಮಾಡಿದೆ.

ಈ ವಿಶಿಷ್ಟ ಕಲೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಸಿಬ್ಬಂದಿ ವರ್ಗ, ಪಾಲಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!