ವರದಿ: ಸಂಗಮೇಶ ಹಿರೇಮಠ..
ರಾಯಬಾಗ.ಮುಗಳಖೋಡ: ಪಟ್ಟಣದ ಶ್ರೀ ಶಾಮಾನಂದಾಶ್ರಮದ ಕಮಿಟಿಯವರು ಗಜಾನನ ಪ್ರತಿಷ್ಠಾಪನೆಯ ಐದನೆಯ ದಿನದ ಗಣೇಶ ವಿಸರ್ಜನೆ ನಿಮಿತ್ಯ 200 ಮಕ್ಕಳಿಗೆ ಉಚಿತ ಬುಕ್ ಹಾಗೂ ಪೆನ್ ಹಂಚುವ ಮೂಲಕ ವಿಭಿನ್ನವಾದ ಗಣೇಶ ಚತುರ್ಥಿ ಆಚರಣೆ ಮಾಡಿದರು.
ಉಚಿತ ಬುಕ್ ಹಾಗೂ ಪೆನ್ ವಿತರಣಾ ಕಾರ್ಯಕ್ರಮಕ್ಕೆ ಪುರಸಭೆ ಸದಸ್ಯರಾದ ಪರಗೌಡ ಖೇತಗೌಡರ ಹಾಗೂ ಗೀತಾ ಎಸ್ ಪ್ರಧಾನಿ ಚಾಲನೆ ನೀಡಿದರು. ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಡಿ ವ್ಹಿ ನಡಟ್ಟಿ, ಸರಕಾರಿ ಪ್ರಾಥಮಿಕ ಕೇಂದ್ರ ಶಾಲೆಯ ಮುಖ್ಯೋಪಾಧ್ಯಾಯ ವಸಂತ ಗಸ್ತಿ, ಸಿಆರ್ ಪಿ ಬಿ ಸೀ ಬಾಗೆನ್ನವರ ಬುಕ್ ಹಾಗೂ ಪೆನ್ ವಿತರಣಾ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು. ಖ್ಯಾತ ಚೌಡಕಿ ಕಲಾವಿದೆ ಚಂದ್ರವ್ವ ಐಹೊಳೆ, ಸಚೀನ ಪ್ರಧಾನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಶಾಮಾನಂದ ಸೇವಾ ಸಮೀತಿಯ ಸದಸ್ಯರಾದ ಶ್ರೀಶೈಲ ಐಹೊಳೆ, ಪರಪ್ಪ ಮೇತ್ರಿ, ಮಾರುತಿ ಮಾದರ, ಚಂದ್ರಕಾಂತ ಮಾದರ, ಶಿವಾನಂದ ಐಹೊಳೆ, ಶಿವರಾಯಿ ಮೇತ್ರಿ, ಬಾಳು ಮಾದರ, ಹಣಮಂತ ಕೆಳಗಡೆ, ತರುಣ ಐಹೊಳೆ, ಅಭಿಷೇಕ ಮೇತ್ರಿ, ವಿಠ್ಠಲ ಐಹೊಳೆ, ರುಕ್ಮಿಣಿ ಐಹೊಳೆ, ಸಾವಿತ್ರಿ ಐಹೊಳೆ, ಸ್ವಪ್ನಾ ಐಹೊಳೆ, ಚಂದವ್ವ ಮೇತ್ರಿ, ಮಂಗಲ ಐಹೊಳೆ, ಲಕ್ಷ್ಮವ್ವ ಹಲಗಿ, ಕಲ್ಲವ್ವ ದೊಡಮನಿ, ಇಂದ್ರವ್ವ ಐಹೊಳೆ, ಶೋಭಾ ಪೂಜೇರಿ, ಇತರರು ಹಾಜರಿದ್ದರು.