ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ಅಳವಡಿಸಲಾದ 8ಸೋಲಾರ ಚಾಲಿತ ಸಿಸಿ ಕ್ಯಾಮೆರಾಗೆ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ರಿಬ್ಬನ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಪುರಸಭೆ 15 ಹಣಕಾಸು ಯೋಜನೆ ಅಡಿಯಲ್ಲಿ ಸುಮಾರು 4.5ಲಕ್ಷ ಮೊತ್ತದ ಸೋಲಾರ್ ಚಾಲಿತ ಪಟ್ಟಣದ ದತ್ತ ಮಂದಿರ, ಮಾಳಿಂಗರಾಯ ದೇವಸ್ಥಾನ, ಕರ್ನಾಟಕ ವೃತ್ತ, ಮಿಲನ ಹೊಟೇಲ, ತಾಜೀನ ಮೆಡಿಕಲ್, ವಿವಿಧೆಡೆ ಸೇರಿ ಒಟ್ಟು 8 ಕ್ಯಾಮೆರಾ ಅಳವಡಿಸಲಾಗಿದ್ದು, ಶನಿವಾರ ಗಣೇಶ ವಿಸರ್ಜನೆ ನಿಮಿತ್ತವಾಗಿ ಪೊಲೀಸ್ ಠಾಣೆಗೆ ಆಗಮಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ರವೀಂದ್ರನ್ ಬಡಫಕೀರಪ್ಪಗೋಳ, ಪಿಎಸ್ಐ ಮಾಳಪ್ಪ ಪೂಜೇರಿ, ಪುರಸಭೆ ಮಾಜಿ ಅಧ್ಯಕ್ಷ ದತ್ತಾ ಸಣ್ಣಕ್ಕಿ, ಮಾಜಿ ಉಪಾಧ್ಯಕ್ಷ ಹಮೀದ್ದೀನ ರೋಹಿಲೆ, ಸದಸ್ಯರಾದ ಸಾದಿಕ್ ರೋಹಿಲೆ, ಅದ್ಬುಲಖಾದರ ರೋಹಿಲೆ, ಸಂಜೀವ ರಡರಟ್ಟಿ, ಗಜಾನನ ಟೊಣ್ಣೆ, ಮೊಹ್ಮದರಫೀಕ ರೋಹಿಲೆ, ಶಿವಪ್ಪಾ ಗಸ್ತಿ, ಇತರ ಸದಸ್ಯರು ಉಪಸ್ಥಿತರಿದ್ದರು