ವರದಿ: ಸಂಗಮೇಶ ಹಿರೇಮಠ.
ರಾಯಬಾಗ.ಮುಗಳಖೋಡ: ಗಣೇಶ ಚತುರ್ಥಿ ನಿಮಿತ್ಯ ಪಟ್ಟಣದ ಶ್ರೀ ಭರಮಲಿಂಗೇಶ್ವರ ದೇವಸ್ಥಾನ ಕಮೀಟಿಯವರು ಹಮ್ಮಿಕೊಂಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮುಗಳಖೋಡ ಪಟ್ಟಣದ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದು, ಅದರಲ್ಲಿ ಮುಗಳಖೋಡ ಪಟ್ಟಣದ ಆದರ್ಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರೂಪಾಯಿ 5 ಸಾವಿರ ಬಹುಮಾನ ಗಿಟ್ಟಿಸಿಕೊಂಡು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲೆಯ ಅಧ್ಯಕ್ಷ ಸುರೇಶ ಜಂಬಗಿ, ಮುಖ್ಯೋಪಾಧ್ಯಾಯ ಅಜಯ ತೇರದಾಳ, ದೈಹಿಕ ಶಿಕ್ಷಕ ಶ್ರೀಕಾಂತ ಖೇತಗೌಡರ, ಸಿಬ್ಬಂದಿಯವರು ಹಾಗೂ ಶಾಲಾ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.
ಕಾರ್ಯಕ್ರಮವನ್ನು ಪ್ರಾಧ್ಯಾಪಕ ಕಾಂತೇಶ ಕೊಚೇರಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ವೈದ್ಯರಾದ ಮಹಾಂತೇಶ ಕುಲಿಗೋಡ, ಪಿಕೆಪಿಎಸ ನ ಉಪಾಧ್ಯಕ್ಷರಾದ ಹನುಮಸಾಬ ನಾಯಿಕ, ಸಂತೋಷ ಅರಭಾವಿ, ನಿವೃತ್ತ ಶಿಕ್ಷಕ ಲಕ್ಷ್ಮಣ ಮುನ್ಯಾಳ, ಅಶೋಕ ಕೊಣ್ಣೂರ, ಅಜಿತ್ ಗೋಕಾಕ್, ರಾಮು ಶೇಗುಣಸಿ, ಶ್ರೀಮತಿ ಲತಾ ಹುದ್ದಾರ, ಶ್ರೀಮತಿ ಕವಿತಾ ಕಾಂಬಳೆ, ಕುಮಾರಿ ಲಕ್ಷ್ಮಿ ಕರಿಭೀಮಗೋಳ, ಜಗದೀಶ ಬಂಬಲವಾಡ ಸೇರಿದಂತೆ ಶ್ರೀ ಭರಮಲಿಂಗೇಶ್ವರ ದೇವಸ್ಥಾನದ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು