ಸೈದಾಪೂರಲ್ಲಿ ಭರದಿಂದ ಸಾಗಿದ “ಗೋರಂಟಿ”* ಚಲನಚಿತ್ರ

Share the Post Now

ಬೆಂಗಳೂರ : ರಾವಲ್ ಸಿನಿ ಫೋಕಸ್ ಅರ್ಪಿಸುವ “ಗೋರಂಟಿ ” ಬಹುಭಾಷಾ ಚಲನಚಿತ್ರದ ಚಿತ್ರೀಕರಣ ಬಾಗಲಕೋಟ ಜಿಲ್ಲೆಯಲ್ಲಿ ಭರದಿಂದ ಸಾಗಿದೆ.

ಕನ್ನಡ ,ತೆಲಗು, ತಮಿಳ್ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಲಾಗುತ್ತಿರುವ ಕುತೂಹಲ ಭರಿತ ಈ ಚಿತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಬಾಗಲಕೋಟ ಜಿಲ್ಲೆಯ ಸೈದಾಪೂರದ ಎಸ್.ಎಚ್.ಕೌಜಲಗಿ ಅವರ ಅರಮನೆಯಲ್ಲಿ ಭರದಿಂದ ಸಾಗಿದೆ. ಚಿತ್ರೀಕರಣದಲ್ಲಿ ಕೌಜಲಗಿ ಅವರ ಕುಟುಂಬವು ಭಾಗಿಯಾಗಿ ಶುಭ ಹಾರೈಸಿದರು. ದೊಡ್ಡ ಮನೆತನ ರಾವ್ ಬಹದ್ದೂರ ವಂಶದಲ್ಲಿ ಹುಟ್ಟಿದ ತಂದೆ-ತಾಯಿ ಇದ್ದರೂ ಅನಾಥ ಎಂಬಂತೆ ಕಾಂತರಾಜ ಎಂಬ ವ್ಯಕ್ತಿಯ ಜೀವನ ನಡೆಯುತ್ತಿರುತ್ತದೆ. ಬದುಕೇ ಬೇಡ ಎಂಬ ನಿರ್ಧಾರಕ್ಕೆ ಬಂದವನ ಜೊತೆಗೆ ನಿರ್ಗತಿಕನೊಬ್ಬ ಜೊತೆಯಾಗುತ್ತಾನೆ. ಇಬ್ಬರದೂ ವಿಚಿತ್ರ ಸ್ವಭಾವ. ಇದರಿಂದಾಗಿ ಚಿತ್ರದೊಳಗೆ ತಿರುವುಗಳೇ ಘಟಿಸುತ್ತಾ ಹೋಗುತ್ತವೆ. ಜೊತೆಗೆ ಇಬ್ಬರು ಯುವತಿಯರ ಮನಸಿನ ತಿಕ್ಕಾಟದ ನಡುವೆ ಸುಂದರವಾದ ಭಾವಚಿತ್ರ ಪೆಂಟಿಂಗ್ ಮೂಡಿ ಬರುತ್ತದೆ. ಆದರೆ ಜೀವನ ವಿಚಿತ್ರವಾಗುತ್ತದೆ ಎಂಬುದು ಗೋರಂಟಿಯಲ್ಲಿದೆ.

ತಾರಾಗಣದಲ್ಲಿ ಮಹೇಶ್ ರಾವಲ್, ಅಥವ೯ ಶೆಟ್ಟಿ, ದಿತ್ಸಾ ರಾಯ್, ಭವ್ಯಾ, ವಿ.ಮನೋಹರ್, ಆಕಾಶರಾಜ, ಮಧುಸೂದನ್, ವೆಂಕಟರಾಜು, ಶಿಲ್ಪಿ ಶ್ರೀವಾತ್ಸವ್, ಕವನ , ಜಗದೀಶ ಕಡೂರ ಮೊದಲಾದವರು ಅಭಿನಯಿಸುತ್ತಿದ್ದಾರೆ. ಜೂಮ್ ರವಿ ಛಾಯಾಗ್ರಹಣ, ಚಂದ್ರು ಬಂಡೆ ಸಾಹಸ, ರಾಜು ಹಾಗೂ ಸ್ಟಾರ್ ನಾಗಿ ಅವರ ನೃತ್ಯ ಸಂಯೋಜನೆಯಿದ್ದು ಹೆಸರಾಂತ ಗೀತ ರಚನೆಗಾರ ಮನ್ವರ್ಷಿ ನವಲಗುಂದ ಸಾಹಿತ್ಯ ರಚಿಸಿದ್ದಾರೆ , ವಿಕಾಸ್ ರಜತ್ ಎಂಬ ಯುವ ಸಂಗೀತ ನಿರ್ದೇಶಕರ ಸಂಗೀತ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಅವರದಿದೆ. ಕಥೆ –ಚಿತ್ರಕಥೆ- ಸಂಭಾಷಣೆ ಹಾಗೂ ನಿರ್ದೇಶನವನ್ನು ಮಹೇಶ್ ರಾವಲ್‌ರವರೇ ನಿರ್ವಹಿಸುತ್ತಿದ್ದಾರೆ. ಲತಾ ರಾವಲ್‌ರವರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

ವರದಿ :ಡಾ. ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬

Leave a Comment

Your email address will not be published. Required fields are marked *

error: Content is protected !!