ಸಾಹಿತಿ ಶ್ರೀ.ಎಂ.ಕೆ.ಶೇಖ್ ರ ಕೃತಿ “ಚಿತ್ರಾಂಧೆಗಳು” ಲೋಕಾರ್ಪಣೆ.

Share the Post Now

ವರದಿ :ಸಂಜೀವ್ ಬ್ಯಾಕುಡೆ



ಕುಡಚಿ/ವಿಜಯಪುರ

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕ, ಸಾಹಿತಿ ಎಂ.ಕೆ.ಶೇಖ ಅವರು ಬರೆದ ಕೃತಿ ಇದೆ ಅಕ್ಟೋಬರ್ ೨ ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಬಿದರಕುಂದಿಯಲ್ಲಿ ದಿ.ಎನ್. ಎಲ್.ನಾಯ್ಕೋಡಿ ಪ್ರತಿಷ್ಠಾನದಿಂದ ಪ್ರತಿವರ್ಷ ಅಕ್ಟೋಬರ್ ೨ ರಂದು ಆಚರಿಸಲಾಗುವ ದಿ.ಎನ್.ಎಲ್.ನಾಯ್ಕೋಡಿ ಶಿಕ್ಷಕರ ಪುಣ್ಯ ಸ್ಮರಣೆ ಹಾಗೂ ಮಹಾತ್ಮಾ ಗಾಂಧೀಜಿಯವರ ಮತ್ತು ಲಾಲಬಹಾದ್ದೂರ ಶಾಸ್ತ್ರೀಜಿಯವರ ಜಯಂತಿ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಕ ಸಾಹಿತಿ ಶ್ರೀ ಎಂ.ಕೆ.ಶೇಖ್ ರವರ ಒಂಭತ್ತನೆ ಕೃತಿ “ಚಿತ್ರಾಂಧೆಗಳು” ಎಂಬ ಚುಟುಕು ಸಂಕಲನ ಪುಸ್ತಕ ಲೋಕಾರ್ಪಣೆ ಗೊಳ್ಳಲಿದೆ.

ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಪೂಜ್ಯ ಶ್ರೀ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಪ್ರೋ.ಬಿ.ಎಂ.ಹಿರೇಮಠ, ಚಿಕ್ಕಬಸಪ್ಪಗೌಡ ಪಾಟೀಲ, ಶಿವಕುಮಾರ ಪಾಟೀಲ, ಮುಜಫರ್ ಹುಸೇನ್ ಹಾಗೂ ಕಾರ್ಯಕ್ರಮದ ಆಯೋಜಕರಾದ ಅಬ್ದುಲ್ ರಹಮಾನ್ ಬಿದರಕುಂದಿ ಇರಲಿದ್ದಾರೆ. ಮುಖ್ಯವಾಗಿ ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಕಾರ್ಯಕ್ರಮ ಎಂಬುದು ವಿಶೇಷ.

ಈ ಒಂದು ತಿಂಗಳ ಅವಧಿಯಲ್ಲಿ ಸಾಹಿತಿ ಎಂ.ಕೆ.ಶೇಖ್ ರವರ ಎರಡನೇ ಕೃತಿ ಬಿಡುಗಡೆ ಆಗುತ್ತಿರುವದು ವಿಶೇಷ. ಸೆಪ್ಟೆಂಬರ್ ಐದರಂದು ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಚಿನ್ನದ ಗಣಿ ಕೋಲಾರದಲ್ಲಿ ಶ್ರೀಯುತರ ಎಂಟನೇ ಕೃತಿ “ಭೂರಮೆ” ಹೈಕು ಸಂಕಲನ ಲೋಕಾರ್ಪಣೆ ಗೊಂಡಿತ್ತು .

Leave a Comment

Your email address will not be published. Required fields are marked *

error: Content is protected !!