ಬೆಳಗಾವಿ. ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ಶ್ರೀ ಅರಣ್ಯ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಮಾಜಿ ಶಾಸಕ ಪಿ. ರಾಜೀವ್ ಅವರಿಂದ ಸ್ವಚ್ಛತಾ ಕಾರ್ಯ.
ಮಹಾತ್ಮಾ ಗಾಂಧಿಜಿಯವರ ಪ್ರಮುಖ ಕನಸುಗಳಲ್ಲಿ ಒಂದಾದ ಸ್ವಚ್ಛತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನಕ್ಕೆ ರವಿವಾರ ಯಲ್ಪಾರಟ್ಟಿಯ ಶ್ರೀ ಅರಣ್ಯ ಸಿದ್ಧೇಶ್ವರ ದೇವಸ್ಥಾನವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸ್ಥಳೀಯರು ಕಾರ್ಯಕರ್ತರೊಂದಿಗೆ ಭಾಗಿಯಾಗಿ ಶ್ರಮದಾನ ಮಾಡಿದರು.
ಈ ಸಂದರ್ಭದಲ್ಲಿ ಹಣಮಂತ ಯಲಶಟ್ಟಿ, ಸಿದ್ದು ಮೂಡಲಗಿ, ಸ್ಥಳೀಯರು, ಭಕ್ತಾದಿಗಳು ಹಾಗೂ ಕಾರ್ಯಕರ್ತರು ಭಾಗಿಯಾದರು.