ವರದಿ: ಸಂಗಮೇಶ ಹಿರೇಮಠ.
ರಾಯಬಾಗ.ಮುಗಳಖೋಡ: ಪ್ರಚಲಿತ ದಿನಗಳಲ್ಲಿ ನಮ್ಮ ಯುವ ಪೀಳಿಗೆಯು ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆಸಕ್ತಿ ತೋರಬೇಕು. ಸರಕಾರ ನೀಡುತ್ತಿರುವ ಪ್ರತಿಯೊಂದು ಯೋಜನೆಯು ಫಲಕಾರಿಯಾಗಬೇಕಾದರೆ, ವಸ್ತುನಿಷ್ಠ ಫಲಾನುಭವಿಗಳಿಗೆ ಯೋಜನೆಗಳು ತಲುಪಬೇಕಿದೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಅವರು ಮುಗಳಖೋಡ ಪಟ್ಟಣದ ಡೋಹರ ಸಮುದಾಯದ ಫಲಾನುಭವಿಗಳಿಗೆ ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ , ನಿಯಮಿತ ಬೆಂಗಳೂರು, ಲಿಡಕರ್ ಶಿರ್ಷಿಕೆಯಡಿಯಲ್ಲಿ 60 ದಿನಗಳ ಹೊಲಿಗೆ ಯಂತ್ರ ತರಬೇತಿಯನ್ನು ಪೂರೈಸಿದ ಡೋಹರ ಸಮುದಾಯದ 30 ಜನ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು
ನಂತರ ಮಾತನಾಡಿದ ಡಾ. ಬಾಬು ಜಗಜೀವನ ರಾಮ್ ಅಭಿವೃದ್ಧಿ ನಿಗಮದ ಜಿಲ್ಲಾ ಸಂಯೋಜಕ ರುದ್ರೇಶ ಈ ಯೋಜನೆಯಡಿಯಲ್ಲಿ ಮಾದಗರು, ಡೋಹರರು, ಸಮಗಾರರು, ಮೋಚಗಾರ ಸೇರಿದಂತೆ ಐದು ಸಮುದಾಯದ ಫಲಾನುಭವಿಗಳು ಅರ್ಹರಾಗಿರುತ್ತಾರೆ. ಆಯಾ ಪ್ರದೇಶದ ಜನರ ಅವಶ್ಯಕತೆಗೆ ಅನುಗುಣವಾಗಿ ಉಚಿತ ತರಬೇತಿ ನೀಡಿ ಸೌಲತ್ತು ವಿತರಣಾ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಡಾ. ಸಿ ಬಿ ಕುಲಿಗೋಡ, ಪುರಸಭೆ ಸದಸ್ಯರಾದ ಪರಗೌಡ ಖೇತಗೌಡರ, ರಮೇಶ ಯಡವನ್ನವರ, ಮಹಾವೀರ ಕುರಾಡೆ, ಸಂತೋಷ ಸವನೂರ, ಕಖಿಲ ಕರ್ನಾಟಕ ಡೋಹರ ಕಕ್ಕಯ್ಯ ಸಮಾಜದ ರಾಜ್ಯಾಧ್ಯಕ್ಷ, ಪ್ರಮುಖರಾದ ಗೋಪಾಲ ತೇರದಾಳ, ಅಶೋಕ ಹಳಿಂಗಳಿ, ಅಶೋಕ ಕದಂ, ಸಂಜು ಕದಂ, ಯಮನಪ್ಪ ಕದಂ, ಭರಮಾಜೀ ಕದಂ, ಪ್ರವೀಣ ಕದಂ, ಈಶ್ವರ ಕದಂ, ಮಲ್ಲಿಕಾರ್ಜುನ ಕದಂ, ಕಿರಣ ಕದಂ ಉಪಸ್ಥಿತರಿದ್ದರು.