೦-೫ ವರ್ಷದ ಮಕ್ಕಳಿಗೆ ಅಪೌಷ್ಟಿಕತೆ ಹೋಗಲಾಡಿಸಲು ಪೌಷ್ಟಿಕಾಂಶದಿಂದ ಕೂಡಿದ ಆಹಾರ ಕೊಡಬೇಕು, ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ವಿವಿಧ ರೋಗಗಳನ್ನು ತಡೆಗಟ್ಟುವಲ್ಲಿ ಪೌಷ್ಟಿಕಾಂಶ ಪಾತ್ರ ಮಹತ್ವದಾಗಿದೆ ಎಂದು ಪ.ಪಂ ವಾರ್ಡ ನಂ ೧೬ ಸದಸ್ಯ ಮೌಲಾಸಾಬ ವರ್ಚಸ್ ಹೇಳಿದರು. ಪಟ್ಟಣದ ವಾರ್ಡ ನಂ ೦೫-೧೬ ರಲ್ಲಿ ಬರುವ. ಬೀರಪ್ಪ ಗುಡಿಯ ಹತ್ತಿರ ಅಂಗನವಾಡಿ ಕೇಂದ್ರ ಸಂಖ್ಯೆ ೦೧ ರಲ್ಲಿ ಸೀಮಂತ ಕಾರ್ಯಕ್ರಮ,ಅನ್ನಪ್ರಸನ್ನ ಕಾರ್ಯಕ್ರಮ, ಗರ್ಭಿಣಿಯರ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೌಷ್ಠಿಕ ಆಹಾರವನ್ನು ಸೇವಿಸುವುದ ರಿಂದ ಗರ್ಭದಲ್ಲಿನ ಶಿಶುವಿನ ಬೆಳವಣಿಗೆ ಗರ್ಭಿಣಿಯರು ಉತ್ತಮವಾಗಿರಲು ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸುವುದು ಅತ್ಯಗತ್ಯವಾಗಿದೆ. ಉತ್ತಮ ಆಹಾರ ಸೇವಿಸುವುದ ರೋಗವನ್ನು ದೂರ ಇಡಬಹುದಾಗಿದೆ. ಗರ್ಭಿಣಿಯರು ಕಾಲ ಕಾಲಕ್ಕೆ ತಕ್ಕಂತೆ ದಿನಗಳಲ್ಲಿ ಗುಣಮಟ್ಟದೊಂದಿಗೆ ಆಹಾರದ ಪ್ರಮಾಣವೂ ಹೆಚ್ಚಾಗಬೇಕಾಗುತ್ತ ದೆ. ಗರ್ಭಿಣಿ ದೇಹದಲ್ಲಿ ಗರ್ಭ ಕೋಶ, ಅಂಡಧಾರಕ ಗರ್ಭ ಶಿಶು ಹಾಗೂ ಗರ್ಭಜಲ ಉ ತ್ಪತ್ತಿಯಾಗುತ್ತದೆ. ಉತ್ತಮ ಆರೋ ಗ್ಯಕ್ಕಾಗಿ ಪೌಷ್ಟಿಕ ಅಂಶವುಳ್ಳ ಆಹಾರ ಸೇವಿಸಿ ಎಂದು ಗರ್ಭಿಣಿ ಮತ್ತು ಬಾಣತಿಯರಿಗೆ ಕಿವಿಮಾತು ಹೇಳಿದರು.
ಅಂಗನವಾಡಿ ಮೇಲ್ವಿಚಾರಕಿ ನೀಲಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ, ನೀಲಮ್ಮ, ರಂಗಮ್ಮ ನಮ್ಮ ಕ್ಲಿನಿಕ್ ಸಿಬ್ಬಂದಿ ಮತ್ತು ಎಲ್ಲಾ ತಾಯಂದಿರು, ಗರ್ಭಿಣಿಯರು,ಅಂಗನವಾಡಿ ಕಾರ್ಯ ಕರ್ತೆಯರು ಭಾಗವಹಿಸಿದರು.