ಎಸ್.ಎಫ್.ಸಿ ಅನುದಾನದಡಿ 1 ಲಕ್ಷ ರೂಪಾಯಿ ನಿಗದಿ…
ವರದಿ: ಸಂಗಮೇಶ ಹಿರೇಮಠ.
ರಾಯಬಾಗ.ಮುಗಳಖೋಡ: ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ನಡೆದ ವಿಭಾಗ ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಗೆಲುವು ಸಾಧಿಸಿದ ಮುಗಳಖೋಡ ಪಟ್ಟಣದ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಓಟದಲ್ಲಿ ರಾಜಮಟ್ಟಕ್ಕೆ ಆಯ್ಕೆಯಾದ ಹನುಮಾನ್ ಶಿಕ್ಷಣ ಸಂಸ್ಥೆಯ ಶ್ರೀ ಶಿವಶಕ್ತಿ ಕಮಾಹಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೆ ಪಟ್ಟಣದ ಪುರಸಭೆಯ ಎಲ್ಲ ಸದಸ್ಯರು, ಮುಖ್ಯಾಧಿಕಾರಿಗಳು ಸೇರಿ ಸತ್ಕರಿಸಿ ಧನ ಸಹಾಯ ಮಾಡಿ ಶುಭ ಹಾರೈಸಿದರು.
ನಂತರ ಪುರಸಭೆ ಸದಸ್ಯ ಕೆಂಪಣ್ಣ ಅಂಗಡಿ ಮಾತನಾಡಿ ಪಟ್ಟಣದ ಶಾಲೆಗಳಿಂದ ಕ್ರೀಡೆಯಲ್ಲಿ ಜಿಲ್ಲೆ,ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಹೋಗೋ ವಿದ್ಯಾರ್ಥಿಗಳ ಖರ್ಚು ವೆಚ್ಚಕ್ಕಾಗಿ ಎಸ್ ಎಫ್ ಸಿ ಅನುದಾನದಡಿ ೧ ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ದೈಹಿಕ ಶಿಕ್ಷಕ ಬಸವರಾಜ್ ಬಂಡಿಗಣಿ ಮುಗಳಖೋಡ ಪಟ್ಟಣದ ಹಿರಿಯರ ಹಾಗೂ ತಮ್ಮೆಲ್ಲರ ಆಶೀರ್ವಾದದಿಂದ ಮತ್ತು ಪ್ರೋತ್ಸಾಹದಿಂದ ನಮ್ಮ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಕಬಡ್ಡಿ ಪಂದ್ಯಾವಳಿಯಲ್ಲಿ ಮುನ್ನುಗ್ಗುತ್ತಿದ್ದಾರೆ ಇದೇ ರೀತಿ ತಮ್ಮೆಲ್ಲರ ಆಶೀರ್ವಾದ ಸಹಕಾರದಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸಿ ಅಂತರಾಷ್ಟ್ರಮಟ್ಟದಲ್ಲಿ ನಮ್ಮ ಮುಗಳಖೋಡದ ಹೆಸರು ತರಲು ನಮ್ಮ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ ಎಂದು ಹೇಳಿ, ಧನಸಹಾಯ ನೀಡಿ ಸತ್ಕರಿಸಿದ ಪುರಸಭೆ ಸದಸ್ಯರಿಗೆ ಅಭಿನಂದನೆ ತಿಳಿಸಿದರು.
ಬಾಕ್ಷ ಲೈನ್:….
೧) ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳಿಗೆ ರಾಷ್ಟ್ರ, ಅಂತರಾಷ್ಟ್ರಮಟ್ಟದವರಿಗೆ ಭಾಗವಹಿಸುವಂತೆ ಪ್ರೋತ್ಸಾಹಿಸಲು ಪಟ್ಟಣದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಪುರಸಭೆ ಎಲ್ಲ ಸದಸ್ಯರ ಅನುಮತಿಯೊಂದಿಗೆ ಎಸ್.ಎಫ್.ಸಿ ಅನುದಾನದ ಅಡಿಯಲ್ಲಿ ೧ ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ.
“ಎಸ್ ಓ ವಡೇರ್” ಮುಖ್ಯಾಧಿಕಾರಿ ಪುರಸಭೆ ಮುಗಳಖೋಡ.
೨) ಪುರಸಭೆ ಮುಖ್ಯಾಧಿಕಾರಿ ಹಾಗೂ ಎಲ್ಲ ಸದಸ್ಯರ ಪ್ರೀತಿ ವಿಶ್ವಾಸದ ಈ ಧನಸಹಾಯ ಹಾಗೂ ಸತ್ಕಾರ ವಿದ್ಯಾರ್ಥಿಗಳು ಮುನ್ನಡೆಯಲು ಮತ್ತಷ್ಟು ಮೆರುಗು ತಂದಿದೆ ಮುಗಳಖೋಡ ಪುರಸಭೆಗೆ ಅಭಿನಂದನೆಗಳು.
“ವಿರಪಾಕ್ಷಯ್ಯಾ ಕರಡಿ” ಮುಖ್ಯೋಪಾಧ್ಯಾಯ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಮುಗಳಖೋಡ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪರಪ್ಪ ಖೇತಗೌಡರ, ರಮೇಶ್ ಯಡವನ್ನವರ, ಹಾಲಪ್ಪ ಶೇಗುಣಸಿ, ಕೆಂಪಣ್ಣ ಅಂಗಡಿ, ಚೇತನ್ ಯಡವನ್ನವರ, ರಾವಸಾಬ್ ಗೌಲತ್ತಿನವರ, ಮುಖ್ಯಾಧಿಕಾರಿ ಎಸ್.ಓ.ವಡೇರ, ಮಹಾವೀರ್ ಕುರಾಡೆ, ವಿಠ್ಠಲ ಯಡವನ್ನವರ್ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಶೋಕ ಕೊಪ್ಪದ, ಸಿದ್ದರಾಮೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವಿರುಪಾಕ್ಷಯ್ಯ ಕರಡಿ, ಶಿವು ಹಂಚಿನಾಳ, ದೈಹಿಕ ಶಿಕ್ಷಕ ಬಸವರಾಜ್ ಬಂಡಿಗಣಿ, ಮಾನಿಂಗ ಕೊಪ್ಪದ, ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ನೇಹಾ ಯಡವಣ್ಣವರ, ಕಬ್ಬಡ್ಡಿಯಲ್ಲಿ ಭರ್ಜರಿ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿನಿಯರಾದ ಪೂಜಾ ಹಿರೇಮಠ, ಸೌಂದರ್ಯ ಹಿಪ್ಪರಗಿ, ಮೈತ್ರಾ ರಗಟಿ, ವೈಷ್ಣವಿ ಸಾವಳಿ, ಮಾಯವ್ವ ಬೆಳ್ಳಕ್ಕಿ, ಜ್ಯೋತಿ ಕಾಮಾಣಿ, ಭಾಗ್ಯಾ ಬೆಳ್ಳಕ್ಕಿ, ಶ್ರೀದೇವಿ ಯಡವನ್ನವರ, ಸುಹಾಸಿನಿ ಅರಭಾವಿ, ರಶಿತಾ ದೇಸಾಯಿ, ಲಕ್ಷ್ಮೀ ಪೂಜಾರಿ, ಸಾವಿತ್ರಿ ತೂಗದೆಲೆ ಸೇರಿದಂತೆ ವಿದ್ಯಾರ್ಥಿನಿಯರ ಪಾಲಕರು ಕೂಡ ಉಪಸ್ಥಿತರಿದ್ದರು.