ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸಿದ ಕಿತ್ತೂರು ಉತ್ಸವ ಜ್ಯೋತಿಯನ್ನು ರಾಯಬಾಗ ತಾಲೂಕಾ ಆಡಳಿತ, ಕುಡಚಿ ನಾಡಕಚೇರಿ, ಪುರಸಭೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅದ್ಧೂರಿಯಾಗಿ ಬರಮಾಡಿಕೊಂಡರು.
ರಾಯಬಾಗ ತಾಲೂಕಾ ಹದ್ದಿ ಪ್ರಾರಂಭವಾಗುವ ಕುಡಚಿ ಪಟ್ಟಣದ ಕೃಷ್ಣಾ ನದಿ ಸೇತುವೆ ಬಳಿ ಗ್ರೇಡ 2 ತಹಶೀಲ್ದಾರ್ ಪರಮಾನಂದ ಮಂಗಸೂಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಾರಾಮ ಜೋಗಳೆ ಜ್ಯೋತಿಗೆ ಮಾಲೆ ಹಾಕಿ ಬರಮಾಡಿಕೊಂಡರು ನಂತರ ಕೃಷ್ಣಾ ನದಿಯಿಂದ ಉಗಾರ ಜಮಖಂಡಿ ರಸ್ತೆ ಮೂಲಕ ಚಿಂಚಲಿ ವೃತ್ತದ ವರೆಗೆ ಅಂಗನವಾಡಿ ಕಾರ್ಯಕರ್ತೆಯರು ಪೂರ್ಣಕುಂಭದೊಂದಿಗೆ ಹಾಗೂ ಸಕಲ ಮಂಗಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಬಂದು ವೃತ್ತದಲ್ಲಿ ಉಪ ತಹಶೀಲ್ದಾರ್ ಎಸ್.ಜಿ.ದೊಡಮನಿ ಹಾಗೂ ಪುರಸಭೆ ಸದಸ್ಯರು ಕನ್ನಡಪರ ಸಂಘಟನೆಗಳಿಂದ ಜ್ಯೋತಿಗೆ ಪೂಜೆ ಸಲ್ಲಿಸಿ ರಾಯಬಾಗ ಮಾರ್ಗಕ್ಕೆ ಮುಂದೆ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಸಿಡಿಪಿಒ ಸಂತೋಷಕುಮಾರ ಕಾಂಬಳೆ, ಉಪ ತಹಶೀಲ್ದಾರ್, ಐ.ಕೆ.ಹಿರೇಮಠ, ಕಂದಾಯ ನಿರೀಕ್ಷಕ ರಾಜು ದಾನೋಳಿ, ಗ್ರಾಮ ಲೆಕ್ಕಾಧಿಕಾರಿ ವಾಯ.ಕೆ.ಹೆಳವರ, ಸಂಪನ್ಮೂಲ ವ್ಯಕ್ತಿಗಳು, ಪುರಸಭೆ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಜಾಗೃತಿ ವೇದಿಕೆ ಸದಸ್ಯರು, ಪಟ್ಟಣದ ಪ್ರಮುಖರು, ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.
ಮಾರ್ಗದುದ್ದಕ್ಕೂ ಪಿಎಸ್ಐ ಆರ.ಆರ.ಕಂಗನೋಳಿ, ಎಸ.ಜಿ.ಖೋತ, ಎ.ಎಸ.ಐ.ಸ ಕಲ್ಯಾಣಪೂರಕರ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು