ಬೆಳಗಾವಿ.ರಾಯಬಾಗ: ಈ ಬಾರಿ ರಾಜ್ಯದ ಗಡಿಭಾಗ ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ ಪ್ರತಿ ಸಲ ಕನ್ನಡೋತ್ಸವಕ್ಕೆ ಇಲ್ಲಿನ ಎಂ.ಇ. ಎಸ್.ದವರು ಕರಾಳ ದಿನಾಚರಣೆ ಆಚರಿಸುವ ಮೂಲಕ ತೀವ್ರವಾಗಿ ಅಡ್ಡಿಪಡಿಸಿ ಸಕಲ ಗಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತಿದ್ದರು. ಇತ್ತೀಚೆಗೆ ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ನಿತೇಶ ಪಾಟೀಲ ಅವರು “ಈ ಬಾರಿ ಎಂ.ಇ. ಎಸ್. ನವರಿಗೆ ಕರಾಳ ದಿನಾಚರಣೆ ಆಚರಿಸಲು ಅವಕಾಶ ನೀಡುವುದಿಲ್ಲ” ಎಂದು ದಿಟ್ಟ ಹಾಗೂ ಖಡಕ್ ಸೂಚನೆ ನೀಡುವ ಮೂಲಕ ಕರಾಳ ದಿನಾಚರಣೆಗೆ ತಾಲೀಮು ನಡೆಸುತ್ತಿದ್ದ ಎಂ.ಇ. ಎಸ್.ನವರಿಗೆ ಎಚ್ಚರಿಕೆಯ ಜಾಗಟೆ ಬಾರಿಸಿ ಜಿಲ್ಲಾಧಿಕಾರಿಗಳು ನೀಡಿದ ಈ ಮಹತ್ವಪೂರ್ಣ ಸೂಚನೆ ಸ್ವಾಗತಾರ್ಹ ಹಾಗೂ ಔಚಿತ್ಯಪೂರ್ಣವಾದುದು.
ಡಾ. ಜಯವೀರ ಎ.ಕೆ. ಕನ್ನಡ ಪ್ರಾಧ್ಯಾಪಕರು. ಖೇಮಲಾಪುರ.