ಹಳ್ಳೂರ .ಶ್ರೇಷ್ಟ ಜಂಗಮರ ಪಾದದಲ್ಲಿ ಮಾತ್ರ ಪುಣ್ಯವಿರುತ್ತದೆ. ಸ್ತ್ರೀಯರನ್ನು ಗೌರವಿಸಿ ಪೂಜಿಸುವ ಒಳ್ಳೆಯ ಸಂಸ್ಕೃತಿ ನಮ್ಮದು.ಜಗತ್ತಿಗೆ ದೇಶವು ಮಾತೃ ಸ್ಥಾನ ಪಡೆದಿದೆ. ರಾಮ ಕೃಷ್ಣ ಹರಿ, ಓಂ ನಮಃ ಶಿವಾಯ ಮಂತ್ರದಲ್ಲಿ ಆಗಾಧವಾದ ಶಕ್ತಿ ಇದೆ ಎಂದು ಕಪರಟ್ಟಿ ಶ್ರೀ ಬಸವರಾಜ ಸ್ವಾಮೀಜಿಯವರು ಹೇಳಿದರು.
ಅವರು ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವ ನಿಮಿತ್ಯ ಹಮ್ಮಿಕ್ಕೊಂಡ ದೇವಿ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ ಕಾಮ,ಕ್ರೋಧ, ಲೋಭ, ಮೋಹ, ಮಧ, ಮತ್ಸರ ಗಳಿಂದ ತುಂಬಿದ ಶರೀರವನ್ನೂ ಪುಣ್ಯದ ಕಾರ್ಯಗಳನ್ನು ಮಾಡಿ ಜೀವನ ಪಾವನ ಮಾಡಿಕೊಳ್ಳಿರಿ. ಪಾಪ ಪುಣ್ಯ ಗಳನ್ನು ಮಾಡಿದ್ದೂ ನಾವೇ ಅನುಭವಿಸುವ ಸಮಯ ಬರುತ್ತದೆ. ಕರ್ಮಾನುಸಾರವಾಗಿ ಕಷ್ಟಗಳು ಒದಗಿ ಬರುತ್ತವೆ.ಅನ್ಯಾಯದ ಹಣವನ್ನು ಸತ್ಕಾರ್ಯಗಳಿಗೆ ಬಳಸಿದರೆ ಸಲ್ಲುವುದಿಲ್ಲ. ಸತ್ಯದ ಕಾಯಕ ಮಾಡಿ ಗಳಿಸಿದ ಹಣ ದೇವರಿಗೆ ಸಲ್ಲುತ್ತದೆ. ಅನ್ಯಾಯ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಬೇಡಿ ಕಾಲವೇ ಅವರಿಗೇ ಉತ್ತರಿಸುತ್ತದೆ.
ಪಾಪ ಕರ್ಮ ಹೆಚ್ಚಾಗುತ್ತಿದ್ದಂತೆ ಬಯಾನಕ ರೋಗಗಳು ಬರುತ್ತವೆ ಆವಾಗ ದೇವರಿಗೆ ಮೊರೆ ಹೋದಾಗ ಮಾತ್ರ ಉಪಾಯ ಸಿಗುತ್ತದೆ. ಭಗವಂತನ ನಾಮಸ್ಮರಣೆ ಮಾಡಿ ಮುಕ್ತಿ ಪಡೆಯಿರೆಂದು ಹೇಳಿದರು. ಈ ಸಮಯದಲ್ಲಿ ದುರ್ಗಾದೇವಿ, ಮಹಿಷಾಸುರ ಮರ್ದಿನಿ, ಹೀಗೆ ಅನೇಕ ದೇವರ ವೇಷ ಭೂಷಣ ಧರಿಸಿದ್ದು ವಿಶೇಷ ಕಂಡು ಬಂದಿತ್ತು. ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು.