ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ತಾಲೂಕಾ ಪಂಚಾಯತ್ ರಾಯಬಾಗ, ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ಕುಡಚಿ, ಲಯನ್ಸ ಕ್ಲಬ್ ಉಗಾರ, ಮರ್ಚೆಂಟ್ ಅಸೋಸಿಯೇಷನ್ ಕುಡಚಿ ಮತ್ತು ಬಿ.ಶಂಕರಾನಂದ ಮಹಾವಿದ್ಯಾಲಯ ಕುಡಚಿ ಇವರ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಜರುಗಿತು.
ಕಾರ್ಯಕ್ರಮಕ್ಕೆ ಐ.ಎಮ.ಎ ಕುಡಚಿ ಅಧ್ಯಕ್ಷ ಡಾ. ಎಚ.ಎನ.ಸಾಬಡೆ ಹಾಗೂ ವೇದಿಕೆ ಗಣ್ಯರಿಂದ ಸಶಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಡಾ. ಎಂತಾ.ಎನ.ಸಾಬಡೆ ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ, ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ವೃದ್ಧಿಯಾಗುವುದಲ್ಲದೆ ಇನ್ನೊಬ್ಬರ ಜೀವ ಉಳಿಸುವ ಮಹಾನ್ ಕಾರ್ಯ ನಮ್ಮದಾಗುತ್ತೆ ಎಂದರು.
ಕಾರ್ಯಕ್ರಮದಲ್ಲಿ ಸಮುದಾಯ ವೈದ್ಯಾಧಿಕಾರಿ ಡಾ. ಸತೀಶ್ ಕಲ್ಲಟ್ಟಿ, ಡಾ. ರಿಯಾಜ ತಾಜೀನ, ಡಾ. ಬಿ.ಎ.ಪಾಟೀಲ, ಡಾ.ಅಜೀತ ಬಿ. ವೈದ್ಯಾಧಿಕಾರಿಗಳು ಬಿಮ್ಸ್ ರಕ್ತನಿಧಿ, ಪುರಸಭೆ ಮಾಜಿ ಅಧ್ಯಕ್ಷ ದತ್ತಾ ಸಣ್ಣಕ್ಕಿ, ಅಶೋಕ್ ಟೊಣ್ಣೆ, ಪ್ರಾಚಾರ್ಯ ಎ.ಎಸ.ಕಾಂಬಳೆ, ಅಲ್ಲಾವುದ್ದೀನ್ ರೋಹಿಲೆ, ಶ್ರೀಶೈಲ ದರೂರೆ, ಆರ್.ಎಮ.ಮಹೇಶ್ವಾಡಗಿ, ಡಾ. ಸಂಜೀವ ಶಿಂಧೆ, ಡಾ.ಅಶ್ವೀನಿ ಆಪ್ತ ಸಲಹೆಗಾರರಾದ ಶೇಖರ್ ದಳವಾಯಿ ಭಾಗಿಯಾಗಿದ್ದರು.