ಸಿರವಾರ,- ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಬೋಗಸ್ ಕಾರ್ಡ್ ವಿತರಣೆ ಮಾಡಲಾಗಿದ್ದು, ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯದ್ಯಕ್ಷರಾದ ಅಶ್ವಥ್ ಟಿ ಮರಿಗೌಡರ ನೇತೃತ್ವದಲ್ಲಿ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಪಟ್ಟಣದ ಕಾರ್ಮಿಕ ಇಲಾಖೆಗೆ ಬೇಟಿ ನೀಡಿ ಕಾರ್ಮಿಕ ನೀರಿಕ್ಷರಿಗೆ ನೀಡಿದ ಮನವಿಯಲ್ಲಿ ಜಿಲ್ಲೆಯ ಹಲವಾರು ತಾಲೂಕಿನಲ್ಲಿ ಇಲಾಖೆಯ ಸಿಬ್ಬಂದಿಯೇ ನಕಲು ಕಾರ್ಮಿಕ ಕಾರ್ಡ್ ನೀಡುತ್ತಿದ್ದಾರೆ, ಇದರಿಂದ ಕಾರ್ಮಿಕರಿಗೆ ವಂಚನೆಯಾಗುತ್ತಿದೆ, ತಾಲೂಕಿನ ಕಾರ್ಮಿಕ ಇಲಾಖೆಯಿಂದ ಅಂಜಲಿ ಎಂಬ ಮಹಿಳೆಗೆ ನೀಡಿದ ಕಾರ್ಮಿಕ ಕಾರ್ಡ್ನ ಮೇಲೆ ಹೆರಿಗೆ ಭತ್ಯೆ ಸಹಾಯ ಕೋರಿ ಧನಸಹಾಯಕ್ಕೆ ಅರ್ಜಿಸಲ್ಲಿಸಲು ಹೋದಾಗ ಕಾರ್ಡ್ ಮಾನ್ಯವಾಗಿರುವುದಿಲ್ಲವೆಂದು ಸೌಲಭ್ಯದಿಂದ ವಂಚಿತರಾಗಿರುತ್ತಾರೆ ಇಂತಹ ನಕಲು ಕಾರ್ಡ್ ನೀಡಿ ಕಾರ್ಮಿಕರಿಗೆ ಮೋಸ ಮಾಡಿದ ಸಿಬ್ಬಂದಿಯನ್ನು ಕೂಡಲೇ ವಜಾಗೊಳಿಸಿ ವಂಚಿತ ಅಂಜಲಿ ಕುಟುಂಬಕ್ಕೆ ಸಿಬ್ಬಂದಿಯವರಿಂದ ನ್ಯಾಯೊದಗಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಅಶ್ವಥ್ ಟಿ ಮರಿಗೌಡ್ರು, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಶಿವಮೂರ್ತಿ, ರಾಜ್ಯ ಸಂಚಾಲಕ ನಿರಂಜನ್ ಪಿ ನಾರಾಯಣ, ಸಿರವಾರ ಘಟಕದ ಅಧ್ಯಕ್ಷ ರವಿರಾಜ, ಲಿಂಗಸೂಗೂರ ಘಟಕದ ಅಧ್ಯಕ್ಷ ಅಧ್ಯಕ್ಷ ಈರಪ್ಪ, ಹುಣಸಗಿ ತಾಲೂಕು ಅಧ್ಯಕ್ಷ ಶಿವು ರಾಠೋಡ್, ಕಲ್ಲಂಗೇರಾ ಘಟಕದ ಅಧ್ಯಕ್ಷ ಹನುಮೇಶ ಸಾನಬಾಳ, ಮಲ್ಲಪ್ಪ ಹಿಂದಿನಮನಿ, ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.