ಬೆಳೆ ರಕ್ಷಣೆ ಮಾಡಲು ಜಿ.ಹಂಪಯ್ಯನಾಯಕ ಒತ್ತಾಯ. ಸಿರವಾರ.
ರಾಯಚೂರು ನಗರ ಸೇರಿ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕೆರೆ ತುಂಬಿಸುವ ಜೊತೆಗೆ ಬೆಳೆಗಳ ರಕ್ಷಣೆಯನ್ನು ಮಾಡಲಾಗುವುದು ಎಂದು ಕಲ್ಬುರ್ಗಿ ಪ್ರಾದೇಶಿಕ ಅಯುಕ್ತರಾದ ಕೃಷ್ಣ ಭಾಜಪೇಯ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ತುಂಗಭದ್ರಾ ಎಡದಂಡೆ ನಾಲೆಯ ಮೈಲ್ ನಂ ೧೦೪ ಬೇಟಿ ನೀಡಿ ನಂತರ ನಾಲೆಯ ಮೇಲೆ ಸಂಚರಿಸಿದ ಅವರು ೯೨,೯೦,೮೯,೮೮,೮೭,೮೬ ಹೀಗೆ ಮಸ್ಕಿಯ ವರೆಗೂ ತೆರಳಿದರು. ಪೂರ್ವದಲ್ಲಿ ಮಾತನಾಡಿದ ಅವರು ವಾಡಿಕೆಗಿಂತಲೂ ಮಳೆಯಾಗಿಲ, ರಾಯಚೂರಿಗೆ ಕುಡಿಯುವ ನೀರಿ ಹರಿಸುವ ಬಂಗಾರಪ್ಪ ಕೆರೆ ಬರಿದಾಗಿದೆ, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮೊದಲು ಕೆರೆ ತುಂಬಿಸಲಾಗುವುದು, ಅದರ ಜೊತೆಗೆ ಬೆಳೆದು ನಿಂತಿರುವ ಬೆಳೆಗೆ ತೊಂದರೆಯಾಗದಂತೆ ಕೆರೆಗೆ ನೀರು ತುಂಬಿಸುವಂತೆ ಅದಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾದಿಕಾರಿಗಳು, ಎಸ್.ಪಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಓಡಾಡುತ್ತಿದ್ದಾರೆ ಎಂದ ಅವರು ಬರ ಘೋಷಣೆಯಾಗಿದೆ,
ಆ ಕಾರ್ಯ ಎಲಿಗೆ ಬಂದಿದೆ ಎಂದರೆ ಈಗಾಗಲೆ ಸರ್ವೆ ಕಾರ್ಯ ಪ್ರಾರಂಭವಾಗಿದೆ. ಆ ಕಾರ್ಯ ಹಾಗೆ ಸಾಗುತ್ತಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.
*ಬೆಳೆ ರಕ್ಷಣೆ ಮಾಡಲು ಜಿ.ಹಂಪಯ್ಯನಾಯಕ ಒತ್ತಾಯ:-* ಈಗಾಗಲೆ ಮಳೆ ಕೈ ಕೊಟ್ಟಿದೆ, ಬೆಳೆಗಳು ಕಾಳು ಕಟ್ಟುವ ಹಂತಕ್ಕೆ ಬಂದಿದೆ, ರೈತರು ಸಾಲ ಸೊಲ ಮಾಡಿಕೊಂಡು ಬಿತ್ತನೆ ಮಾಡಿದ್ದಾರೆ, ನಷ್ಟವಾದರೆ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ. ಕೆರೆ ತುಂಬಿಸುತ್ತಿದೆವೆಂದು ಎಲ್ಲಾ ಉಪಕಾಲುವೆಗಳನ್ನು ಬಂದ್ ಮಾಡಬೇಡಿ, ಕೆರೆ ತುಂಬಿಸಲು ಮೇಲ್ಭಾಗದಿಂದ ನೀರು ತನ್ನಿ. ಕೆರೆ ಖಾಲಿಯಾಗಿರುವುದು ಗಮನಕ್ಕೆ ಇದೆ, ಕೆರೆ ಯಾವಾಗ ಬೇಕಾದರೂ ತುಂಬಿಸಬಹುದು, ಬೆಳೆ ಹಾಳಾದರೆ ಏನು ಮಾಡಲು ಆಗುವುದಿಲ ರೈತರ ಪರಸ್ಥಿತಿ ಅರ್ಥ ಮಾಡಿಕೊಳಿ ಎಂದರು.
ರಾಯಚೂರು ಸಹಾಯಕ ಆಯುಕ್ತೆ ಮಹಿಬೂಬಿ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ನಿಖಿಲ್, ಬಿ. , ಶಾಸಕರಾದ ಜಿ.ಹಂಪಯ್ಯನಾಯಕ, ತಹಸೀಲ್ದಾರ ರವಿ ಎಸ್ ಅಂಗಡಿ, ನೀರಾವರಿ ಎಸ್.ಸಿ ಎಸ್.ಸಿ ಸತ್ಯನಾರಾಯಣ, ಎಇಇ ವಿಜಯಲಕ್ಷ್ಮಿ, ಸಿಪಿಐ ಶಶಿಕಾಂತ ಎಂ, ಪಿಎಸ್ ಐ ಗುರುಚಂದ್ರಯಾದವ, ಶಿರಸ್ತೆದಾರ ಪಕೃದ್ದಿನ್, ಕಂದಾಯ ನಿರೀಕ್ಷಕರಾದ ಶ್ರೀನಾಥ, ಮುಖಂಡರಾದ ಬ್ರೀಜೇಶ ಪಾಟೀಲ್, ಶಿವಶರಣ ಸಾಹುಕಾರ ಅರಕೇರಿ, ಸೂರಿ ದುರುಗಣ್ಣ ನಾಯಕ,ಬಸವರಾಜ ಗಡ್ಲ, ನಾಗರಾಜ ಚಿನ್ನಾನ್, ವಿರೇಶ ಗಡ್ಲ, ರಂಗನಾಥ ನಾಯಕ ಸೇರಿದಂತೆ ಇನ್ನಿತರರು ಇದರು.