ಮೈಸೂರು: ಪ್ರತಿಷ್ಠಿತ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ವೈಮಾನಿಕ ಪ್ರದರ್ಶನ ಅಕ್ಟೋಬರ್ 23 ರಂದು ನಡೆಯಲಿದೆ. ಏರ್ ಶೋನಲ್ಲಿ ಲೋಹದ ಹಕ್ಕಿಗಳ ಹಾರಾಟದೊಂದಿಗೆ ಸೈನಿಕರ ನಾನಾ ಸಾಹಸಗಳನ್ನು ಜನರು ಕಣ್ತುಂಬಿಕೊಳ್ಳಬಹುದಾಗಿದೆ. ಅ.23ರಂದು ನಡೆಯುವ ಏರ್ ಶೋನ ರಿಹರ್ಸಲ್ 22ರಂದು (ಭಾನುವಾರ) ಸಂಜೆ 4 ಗಂಟೆಗೆ ನಡೆಯಲಿದೆ.
5 ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಲೋಕದ ಹಕ್ಕಿಗಳ ಆರ್ಭಟ ಶುರುವಾಗುತ್ತಿದ್ದು, ಬಾನಂಗಳದಲ್ಲಿ ಭಾರತೀಯ ವಾಯುಸೇನೆ ಶಕ್ತಿ ಪ್ರದರ್ಶನ ತೋರಲಿದೆ. ಅ.23 ರಂದು (ಸೋಮವಾರ) ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಏರ್ ಶೋ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ
.23ರಂದು ನಡೆಯುವ ಏರ್ ಶೋನ ರಿಹರ್ಸಲ್ 22ರಂದು (ಭಾನುವಾರ) ಸಂಜೆ 4 ಗಂಟೆಗೆ ನಡೆಯಲಿದೆ. ರಿಹರ್ಸಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮೂರುಗಂಟೆ ಒಳಗೆ ವೀಕ್ಷಣೆಗೆ ಬಂದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಸುಮಾರು 1 ಗಂಟೆಗಳ ಕಾಲ ಸಾಹಸ ಪ್ರದರ್ಶನ ನಡೆಯಲಿದೆ.