ಅರಮನೆ ಆವರಣದಲ್ಲಿ ನಡೆದ ಅದ್ದೂರಿ ಆಯುಧ ಪೂಜೆ, ಮಹಾರಾಜರ ಉಡುಗೆಯಲ್ಲಿ ಕಂಗೊಳಿಸಿದ ಯದುವೀರ್ ಒಡೆಯರ್! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

Share the Post Now

  ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮ ಅದಾಗಲೇ ಪ್ರಾರಂಭವಾಗಿದ್ದು ಕಳೆದ ಎರಡು ಮೂರು ವಾರಗಳಿಂದ ಮೈಸೂರಿನ ಪ್ರತಿ ನಗರಗಳು ವಿಶೇಷ ಕಟ್ಟಡ ಗುಡಿ ಗೋಪುರ ಅರಮನೆ ಹೀಗೆ ಮುಂತಾದವುಗಳ ಸೌಂದರ್ಯವನ್ನು ಇನ್ನಷ್ಟು ಮೆರವುಗೊಳಿಸುವ ಸಲುವಾಗಿ ಲೈಟಿಂಗ್(Lightings) ಗಳನ್ನು ಹಾಕಲಾಗಿದ್ದು ಅದರಂತೆ ಯುವ ಸಂಭ್ರಮ ಯುವ ದಸರಾದಂತಹ (Yuva Dasara) ಅದ್ದೂರಿ ಕಾರ್ಯಕ್ರಮಗಳು ಕೂಡ ಜರಗಿದವು.

ಕನ್ನಡ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳು(Star celebrities) ಈ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಯುವಕರಲ್ಲಿ ಇರುವಂತಹ ಪ್ರತಿಭೆಯನ್ನು ಅನಾವರಣ ಗೊಳಿಸಿದರು. ಅಲ್ಲದೆ ಪುಟ್ಟ ಪುಟ್ಟ ಮಕ್ಕಳ ಸಂಗೀತ ನೃತ್ಯ ಹಾಗೂ ನಾಟಕವನ್ನೆಲ್ಲ ನೋಡಿ ಜಬರ್ದಸ್ತ್ ಮನೋರಂಜನೆಯನ್ನು ಪಡೆದುಕೊಂಡರು. ಇನ್ನು ಮೈಸೂರಿನಲ್ಲಿ ಕಳೆದ 9 ದಿನಗಳಿಂದ ನವರಾತ್ರಿಯನ್ನು ಆಚರಣೆ ಮಾಡಲಾಗುತ್ತಿತ್ತು ಒಂಬತ್ತನೇ ದಿನದಂದು ಸಿದ್ದಿದಾತ್ರಿಯ(Siddhidatri) ಈ ವಿಶೇಷ ನವರಾತ್ರಿಯ ದಿನದಲ್ಲಿ ಆಯುಧ ಪೂಜೆಯನ್ನು ಮಾಡಲಾಗಿದೆ.

ಹೌದು ಗೆಳೆಯರೇ ಮೈಸೂರಿನ ಅರಮನೆ ಆವರಣದಲ್ಲಿ ಈ ಹಿಂದೆ ರಾಜ ಪರಂಪರೆಯವರು ಅನುಸರಿಸುತ್ತ ಬಂದಂತಹ ಸಂಪ್ರದಾಯದಂತೆ ಆಯುಧ ಪೂಜೆಯನ್ನು ನಡೆಸಲಾಗಿದ್ದು 27ನೇ ಮಹಾರಾಜರಾಗಿರುವಂತಹ ಯದುವೀರ್ ಕೃಷ್ಣ ದತ್ತಾ ಚಾಮರಾಜ ಒಡೆಯರ್ (Yaduveer KrishnaDatta Chamaraja Wadiyar) ಅವರು ಮಹಾರಾಜರ ಪೋಷಕನ್ನು ಧರಿಸಿ ಎಲ್ಲಾ ಕಾರ್ಯಗಳಿಗೂ ಚಾಲನೆ ನೀಡಿದರು ಹಾಗೂ ತಮ್ಮ ಪದಾತಿ ದಳದವರ ಜೊತೆ ಸೇರಿ ಆಯುಧಪೂಜೆ (Ayudhapooja) ನೆರವೇರಿಸಿದರು.

ಮುಂಜಾನೆ 5:30 ಸಮಯಕ್ಕೆ ಶುಭ ಮಹೂರ್ತದಲ್ಲಿ ರಾಜ ಮನೆತನದವರು ಪೂಜೆಯನ್ನು ಪ್ರಾರಂಭಿಸಿದ್ದು ಹಿಂದಿನ ಕಾಲದಲ್ಲಿ ರಾಜರುಗಳೆಲ್ಲ ತಮ್ಮ ಯುದ್ಧಕ್ಕಾಗಿ ಬಳಸುತ್ತಿದ್ದಂತಹ ಪ್ರತಿಯೊಂದು ಆಭರಣಗಳನ್ನು ಸಾಲು ಸಾಲಾಗಿ ನಿಲ್ಲಿಸಿ ಅವುಗಳಿಗೆಲ್ಲ ವಿಭೂತಿ ನಾಮವನ್ನು ಇಟ್ಟು ಪೂಜೆ ನೆರವೇರಿಸಿದರು. ಆನಂತರ ಸಾಂಪ್ರದಾಯಕವಾಗಿ ಕಾರುಗಳಿಗೆ ರಾಜರು ಉಪಯೋಗಿಸುತ್ತಿದ್ದಂತಹ ಹಳೆಯ ವಾಹನಗಳಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಕತ್ತಿಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು.

ಆ ಸಂದರ್ಭದಲ್ಲಿ ಆಯುಧ ಗಳಿಗೂ ಅರಿಶಿನ ಕುಂಕುಮ ಪೂಜಾ ಸಾಮಗ್ರಿ ಹೂವು ಹಣ್ಣು ಎಲೆ ಅಡಿಕೆ ಬೂದುಗುಂಬಳಕಾಯಿ ತೆಂಗಿನಕಾಯಿ, ಮಾವಿನ ಸೊಪ್ಪು ಬಾಳೆಕಂಬ ಹೀಗೆ ಮುಂತಾದ ವಸ್ತುಗಳನ್ನು ಬಳಸಿ ಪೂಜಾ ಕೈಂಕರ್ಯ ವನ್ನು ನೆರವೇರಿಸಿದ್ದಾರೆ. ಸೋಮನಾಥೇಶ್ವರ ದೇವಸ್ಥಾನಕ್ಕೆ ತೆರೆದ ಮಹಾರಾಜ ಯದುವೀರ್ ಒಡೆಯರ್ ಅವರು ಜನಸಾಗರದ ನಡುವೆಯೂ ಕೊಂಚವು ದುತಿಗೆಡದ ಬಹಳ ತಾಳ್ಮೆಯಿಂದ ಈ ಎಲ್ಲಾ ಪೂಜಾ ಕೈಯಂಕರ್ಯವನ್ನು ಪೂರೈಸಿದರು.

ಇನ್ನು ವಿಶೇಷವಾಗಿ ಕಿತ್ತಳೆ ಹಾಗೂ ಗುಲಾಬಿ ಮಿಶ್ರಿತ ಇರುವಂತಹ ರಾಜರ ಪೋಷಕನ್ನು ಧರಿಸಿದ ಮಹಾರಾಜ ಯದುವೀರ್ (Maharaja Yaduveer) ರವರು ಮೈತುಂಬ ಆಭರಣ ತಲೆಗೆ ಕಿರೀಟ ಹಣೆಗೆ ಸಿಂಧೂರವನ್ನು ಧರಿಸಿ ರಾಜ ಗಾಂಭೀರ್ಯದಿಂದ ವಿಧಿ ವಿಧಾನಗಳನ್ನು ಬಹಳ ಅರ್ಥಪೂರ್ಣವಾಗಿ ಮಾಡಿದರು. ರಾಜಮಾತೆ ಪ್ರಮೋದ ದೇವಿಯವರು ತಮ್ಮ ಮೊಮ್ಮಗ ಅದ್ಯವೀರ್ ಒಡೆಯರ್ ಅವರೊಂದಿಗೆ ಸೋಫಾದ ಮೇಲೆ ಕುಳಿತು ಅರಮನೆ ಕಿಟಕಿಯಿಂದ ಆಯುಧ ಪೂಜೆಯನ್ನು ವೀಕ್ಷಿಸಿದರು. ಸದ್ಯ ಈ ಎಲ್ಲ ಸುಂದರ ಚಿತ್ರಣಗಳು ಕ್ಯಾಮರಾದ ಕಣ್ಣಿಗೆ ಸೆರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದೆ ಸಿಎಂ ಸಿದ್ದರಾಮಯ್ಯನವರು ಮೈಸೂರಿಗೆ ಭೇಟಿ ನೀಡಲಿದ್ದು, ಅಸಲಿ ಮೈಸೂರು ದಸರಾ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿ ತಾಯಿಯನ್ನು ಜಂಬುಸವಾರಿಯ ಮೂಲಕ ಮೈಸೂರಿನಾದ್ಯಂತ ಮೆರವಣಿಗೆ ನಡೆಸುವ ಮೂಲಕ 10 ದಿನಗಳ ಕಾಲ ಬಹಳ ಅದ್ದೂರಿಯಿಂದ ಆಚರಣೆ ಮಾಡಲಾಗಿರುವ ನಾಡಹಬ್ಬ ದಸರಾ ಗೆ ತೆರೆ ಬೀಳಲಿದೆ. ಈ ಒಂದು ವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ದೂರದ ಊರುಗಳಿಂದಲ್ಲ ಆಗಮಿಸಲಿದ್ದು, ಹಲವು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ದಸರಾ ಉತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇನ್ನು ವಿಐಪಿಗಳು ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಹೊಂದಿರುವವರು ಮಾತ್ರ ಅರಮನೆ ಆವರಣದಲ್ಲಿ ಹಾಸನದ ವ್ಯವಸ್ಥೆಯನ್ನು ಪಡೆಯಲಿದ್ದಾರೆ.

Leave a Comment

Your email address will not be published. Required fields are marked *

error: Content is protected !!