ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಶತಮಾನ ಕಂಡ ಸಾಹಿತಿಗಳು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು

Share the Post Now

ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ

ಕನ್ನಡ ನಾಡು ನುಡಿಗೆ  ವೀರತತ್ವ ಗಳನ್ನು ಬಿತ್ತಿದ ಮಹಾನ್ ಸಾಹಿತಿ ಡಾ. ಜ. ಚ. ನಿ.– ಸಾಹಿತಿ ಸುಧಾ ಪಾಟೀಲ 

ಕನ್ನಡ ನಾಡಿನ ಸಾಹಿತ್ಯಕ್ಕೆ ವೀರ ತತ್ವಗಳನ್ನು ನೀಡಿ ಪೋಷಿಸಿ ವೈರಾಗ್ಯರತ್ನಗಳನ್ನು ಇಟ್ಟ ಸೀಮಾತೀತ ಸಾಹಿತಿ ಹಾಗೂ ಸಾಹಿತ್ಯ ಎಂಬ ಅವರ ವಚನಗಳಿಗೆ ಅವರೇ ನಿದರ್ಶನರಾದವರು ಡಾ. ಜ. ಚ. ನಿ. ಎಂದು ಸಾಹಿತಿ ಸುಧಾ ಪಾಟೀಲ ರವರು ರವಿವಾರ ದಿ. 22 ರಂದು ಬೆಳಗಾವಿ ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಕ.ಸಾ.ಪ ಮತ್ತು ಕನ್ನಡ ಸಂಸ್ಕೃತಿಕ  ಭವನದ ಕ್ಷೇಮಾಭಿವೃದ್ಧಿ ಸಂಘ. ಇವರ  ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ  ಸಾಹಿತಿಗಳು ವಿಶೇಷ ಉಪನ್ಯಾಸ ಮಾಲಿಕೆಯ 4ನೇ ಕಾರ್ಯಕ್ರಮದಲ್ಲಿ  ಡಾ. ಜ. ಚ. ನಿ ರವರ ಕುರಿತು ವಿಶೇಷ ಉಪನ್ಯಾಸ ನೀಡಿದರು.      ಕಾವ್ಯ ಚರಿತ್ರೆ, ನಾಟಕ, ಪ್ರಬಂಧ, ವಚನ ವಿಮರ್ಶೆ, ಸಂಶೋಧನೆ,ಲಕ್ಷಣ ಶಾಸ್ತ್ರ ಅನುವಾದ, ಪ್ರವಾಸ ಕಥನ ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿದ ಡಾ. ಜ. ಚ. ನಿ ರವರಿಗೆ .ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ 

ಗೌರವಿಸಿದೆ.ಅವರ ಇಡೀ ಬದುಕೇ ಒಂದು ಸಾಹಿತ್ಯ. ಸಾಹಿತ್ಯಕ್ಕೂ ಅವರ ಬದುಕಿಗೆ ಅವಿನಾಭಾವ ಸಂಬಂಧವಿದೆ  ಎಂದು ಅವರ ಜೀವನ ಮತ್ತು ಸಾಹಿತ್ಯದ ಕುರಿತಾದ ವಿಶೇಷ ಆಸಕ್ತಿಯನ್ನು ಬಿಚ್ಚಿಟ್ಟರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ಮಾತನಾಡಿ ಕರ್ನಾಟಕವೆಂದು ನಾಮಕರಣವಾದ 50ನೇ ವರ್ಷದ ಈ ಶುಭ ಸಂದರ್ಭದಲ್ಲಿ ನಾಡಿನಲ್ಲಿ ಶತಮಾನ ಕಂಡ ಬೆಳಗಾವಿಯ ಸಾಹಿತಿಗಳ ಕುರಿತಾದ ಈ ಉಪನ್ಯಾಸ ಮಾಲಿಕೆಯಿಂದ             ಕಾಲಾಂತರದಲ್ಲಿ ಮರೆತು ಹೋದ ಹಿರಿಯ ಜೀವಿಗಳನ್ನು  ಸ್ಮರಿಸುವುದರ ಜೊತೆಗೆ ಮುಂದಿನ ಯುವ ಪೀಳಿಗೆಗೆ ಸಾಹಿತ್ಯ ಬೆಳೆಸಲು ಪ್ರೇರಣೆ ನೀಡುವ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ನುಡಿದರು .

ಅತಿಥಿಗಳಾಗಿ ಆಗಮಿಸಿದ್ದ   ಹಿರಿಯ ಸಾಹಿತಿ ಎಲ್ ವಿ ಪಾಟೀಲ ಮಾತನಾಡಿ ಜ. ಚ. ನಿ ರವರ ಬದುಕು ನಿಜಕ್ಕೂ ಪ್ರತಿಯೊಬ್ಬನ ಬದುಕಿಗೆ ಅಂಟಿಕೊಳ್ಳುವಂತದ್ದು ಅವರ ಸಾಹಿತ್ಯ ಪ್ರತಿಯೊಬ್ಬರ ಜೀವನವನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗ್ರಂಥ ಮುದ್ರಣಕ್ಕೆ ಸಹಾಯ ಮಾಡಿದ ದಾನಿಗಳಾದ  ಸಾಹಿತಿ  ಡಾ. ಹೇಮಾ ಸೋನೋಳ್ಳಿ, ಜಯಶೀಲಾ ಬ್ಯಾಕೋಡ, ಜಯಶ್ರೀ ನಿರಾಕಾರಿ, ವಿಜಯಾ ಡಾಂಗೆ,ಲಲಿತಾ ಪರ್ವತ ರಾವ್, ಶಾಂತಾ ಮಸೂತಿ  ರವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯ. ರು. ಪಾಟೀಲ, ಡಾ. ಶೇಖರ ಹಲಸಗಿ, ಡಾ. ಎಸ್ . ಬಿ. ದಳವಾಯಿ,ಬಿ.ಬಿ. ಮಠಪತಿ,  ವಿಠ್ಠಲ  ಪ್ರಸಾದ, ನಿಂಗಪ್ಪ ಮೇಟಿ ಸುರೇಶ ಹಂಜಿ, ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ತಲ್ಲೂರ ಸ್ವಾಗತಿಸಿದರು. ಅನ್ನಪೂರ್ಣಾ ಹಿರೇಮಠ ಮಹಾನಂದಾ ಪರುಶೆಟ್ಟಿ ನಾಡಗೀತೆ ಪ್ರಸ್ತುತಪಡಿಸಿದರು  ಗೌರವ ಕಾರ್ಯದರ್ಶಿಎಂ .ವೈ. ಮೆಣಸಿನಕಾಯಿ ಪ್ರಾಸ್ತವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಕೋಳಿ ನಿರೂಪಿಸಿದರು.ವಿ ಎಂ ಅಂಗಡಿ ವಂದಿಸಿದರು

Leave a Comment

Your email address will not be published. Required fields are marked *

error: Content is protected !!