ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಗ್ರಾಮ ಪಂಚಾಯತ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ಯ ಭಾವಚಿತ್ರ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಅಧ್ಯಕ್ಷ ಸೇರಿದಂತೆ ಯಾವುದೇ ಒಬ್ಬ ಖಾಯಂ ಅಧಿಕಾರಿ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಹಾಗೂ ಹೊರಗುತ್ತಿಗೆ ನೌಕರರು ಕಾರ್ಮಿಕರು ಜಯಂತಿ ಆಚರಿಸಿ 10ಗಂಟೆಯೊಳಗೆ ಕಚೇರಿಗೆ ಬೀಗ ಹಾಕಿ ಹೋಗಿದ್ದಾರೆ.
ಜಯಂತಿ ಆಚರಣೆಯಲ್ಲಿ ಪಿಡಿಓ ಕಾರ್ಯದರ್ಶಿ ಬರದಿದ್ದರಿಂದ ಸರ್ಕಾರ ಮಹಾಪುರುಷರ ಜಯಂತಿಯಂದು ಅಧಿಕಾರಿಗಳಿಗೆ ಮೋಜು ಮಸ್ತಿ ಮಾಡಲು ರಜೆ ನೀಡುವುದಿಲ್ಲ ಮಹಾಪುರುಷರ ಜಯಂತಿ ಆಚರಣೆಗೆ ರಜೆ ನೀಡುತ್ತಾರೆ ಪಿಡಿಓ ರಜೆ ಮೇಲೆ ಇದ್ದರೆ ಕಾರ್ಯದರ್ಶಿ ಯಾಕೆ ಬಂದಿಲ್ಲ ಎಂದು ಕುಡಚಿ ವಾಲ್ಮೀಕಿ ಸಮಾಜದ ಮುಖಂಡರು ಗ್ರಾಮಸ್ಥರು ಪಂಚಾಯತ ಕಚೇರಿ ಎದುರಿಗೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಿಡಿಓ ಅಕ್ಟೋಬರ್ 25ರಿಂದ 27ರ ವರೆಗೆ ರಜೆ ಇದ್ದು ಆದರೆ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಠ್ಠಲ ಚಂದರಗಿ ಅವರನ್ನು ವಿಚಾರಿಸಿದಾಗ ಅವರು ರಜೆ ಮೇಲೆ ಇದ್ದಾರೆ ಎಂದು ಉತ್ತರಿಸಿದ್ದಾರೆ.
ಇದು ಜಯಂತಿ ದಿನವಷ್ಟೇ ಅಲ್ಲ ಪಿಡಿಓ ಅವರದು ದಿನನಿತ್ಯದ ಹಾಡೆ ಇದಾಗಿದೆ ಇವರು ಗ್ರಾಮ ಪಂಚಾಯಿತಿಗೆ ಹಾಜರಾದಾಗಿನಿಂದಲು ಕಚೇರಿಗೆ ಬರುವ ಸಮಯವೇ ಇಲ್ಲ ನಿತ್ಯ ಮಧ್ಯಾಹ್ನ ಎರಡು ಗಂಟೆಗೆ ಬಂದು ರಾತ್ರಿ ಹೋಗ್ತಾರೆ ಯಾರಾದರೂ ಕೇಳಿದರೆ ಮದ್ಯಾಹ್ನ ಬರ್ತಿನಂತಾ ಯಾರು ಹೇಳಿದ್ರು ಅಂತಾರೆ ನಾವೇ ನಾಲ್ಕೆದು ದಿನದಿಂದ ಬರ್ತಿದಿನಿ ಅಂದ್ರೆ ಮದ್ಯಾಹ್ನ ಬಂದು ರಾತ್ರಿ ವರೆಗೂ ಇರ್ತಿನಿ ಅಂತಾ ಬೇಜವಾಬ್ದಾರಿ ಉತ್ತರ ನೀಡುತ್ತಾರೆ.
ಬಹುಶಃ ಈ ಪಿಡಿಓ ಮೇಡಂಗೆ ಕಚೇರಿ ಸಮಯ ಗೊತ್ತಿಲ್ಲ ಅನ್ಸುತ್ತೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಕಚೇರಿ ಸಮಯ ತಿಳಿಸಿಕೊಡಬೇಕು ಜಯಂತಿಗೆ ಗೈರು ಹಾಜರಾಗಿದ್ದಕ್ಕೆ ರಾಯಬಾಗ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಸಿಇಓ ಅವರು ಸೂಕ್ತ ಕ್ರಮ ಜರುಗಿಸಬೇಕೆಂದು ವಾಲ್ಮೀಕಿ ಸಮಾಜದವರು ತಹಶೀಲ್ದಾರ ಮುಖಾಂತರ ಸಿಇಓ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಮಾನ ನಾಯಿಕ, ಶ್ಯಾಮು ನಾಯಿಕ, ಈರಪ್ಪ ನಾಯಿಕ, ವಿಜಯ ನಾಯಿಕ, ಅಣ್ಣಾಸಾಬ ಸನದಿ, ಸಂದೀಪ್ ಗಸ್ತಿ, ಅಜೀತ ಗಸ್ತಿ, ಅಜೀತ ಬಸ್ತವಾಡೆ ವಾಲ್ಮೀಕಿ ಸಮುದಾಯದ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.