ವರದಿ :ಸಂಜೀವ್ ಬ್ಯಾಕುಡೆ
ಬೆಳಗಾವಿ.ರಾಯಬಾಗ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರಾಜು ಪೋವಾರ ಗುರುತಿನ ಚೀಟಿ ವಿತರಿಸಿದರು.
ರಾಜು ಪೋವಾರ ಇಲ್ಲಿಯವರೆಗೆ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಾ ಈ ವರ್ಷ ಮಳೆ ಇಲ್ಲದೆ ನೀರಿನ ಅಭಾವದಿಂದ ರೈತರ ಬೆಳೆದ ಬೆಳೆಗಳು ಒಣಗುತ್ತಿವೆ. ಇಂತಹದರಲ್ಲಿ ಸರ್ಕಾರ ರೈತರಿಗೆ ಮೊದಲಿನಂತೆ 7ಗಂಟೆ ಸಮರ್ಪಕ ವಿದ್ಯುತ್ ಪೂರೈಸದೆ 2-3ಗಂಟೆ ವಿದ್ಯುತ್ ನೀಡುತಿದ್ದು ಇದರಿಂದ ಅಳಿದುಳಿದ ಬೆಳೆಗಳು ಒಣಗಿ ಹೋಗುತ್ತಿವೆ ರೈತರಿಗೆ ಕೂಡಲೆ ಸಮರ್ಪಕ ವಿದ್ಯುತ್ ನೀಡದಿದ್ದರೆ ಬೃಹತ್ ಪ್ರಮಾಣದಲ್ಲಿ ಬಂದು ಹೆಸ್ಕಾಂಗೆ ಮುತ್ತಿಗೆ ಹಾಕಲಾಗುವುದು. ರಾಜಕಾರಣಿಗಳು ವಿಧಾನ ಸಭೆಯಲ್ಲಿ ಕುಳಿತು ಮಾತನಾಡದೆ ರೈತರ ಜಮೀನುಗಳಿಗೆ ಸಮಕ್ಷಮ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು, ರೈತರು ಬೆಳೆದ ಕಬ್ಬು ಬೆಳೆಗಾರರಿಗೆ ಪ್ರತಿ ಟನಗೆ ಮೂರು ಸಾವಿರದ ಐದು ನೂರು ಎಫ್ಫಾರ್ಪಿ ದರ ನೀಡಬೇಕು ಸರ್ಕಾರದಿಂದ ಎರಡು ಸಾವಿರ ಸೇರಿಸಿ ಐದು ಸಾವಿರ ಐದು ನೂರು ದರ ನೀಡುವುದು ವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಇದೆ ಸಮಯದಲ್ಲಿ ತಾಲೂಕಾ ಅಧ್ಯಕ್ಷ ಮಹಾದೇವ ಹೋಳ್ಕರ ಮಾತನಾಡಿ ರೈತರಿಗಾಗಿ ಇರುವ ವಿವಿಧ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸದೆ ಸರಿಯಾದ ದಾಖಲಾತಿಗಳನ್ನು ನೀಡಲು ಮಾಹಿತಿ ನೀಡಲು ಅವರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ನಮಗಾಗಿ ಇರುವ ಈ ಅಧಿಕಾರಿಗಳು ಕೆಲಸಕಾರ್ಯಗಳಿಗೆ ತೊಂದರೆ ನೀಡಿದರೆ ಯಾರಿಗೂ ಅಂದೆ ಒಗ್ಗಟ್ಟಾಗಿ ಎದುರಿಸುವ ಶಕ್ತಿ ನಮ್ಮ ರೈತ ಸಂಘದಲ್ಲಿದೆ ಏನೆ ತೊಂದರೆ ಬಂದರೂ ಗಮನಕ್ಕೆ ತಂದು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಪರಿಹರಿಸೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮಾಯಪ್ಪ ಲೋಕೂರೆ, ಮಾಯಪ್ಪ ಲೋಕುರೆ , ಶ್ರವಣ ದೇವಮಾನೆ ತಾಲೂಕಿ ಸಂಚಾಲಕ ರಾಯಬಾಗ, ರಾಮು ಶಿರಗೂರೆ ತಾಲೂಕಾ ಕಾರ್ಯದಶಿ, ಬಸ್ತವಾಡದ ಮಾರೂತಿ ಪಾಟೀಲ, ,ಭಿಮಶಿ ಅಳಗುಂಡಿ , ಅಶೋಕ ಭಜಂತ್ರಿ, ಹಾಲಪ್ಪ ಅಂಕಲಗಿ ,ಬಸಪ್ಪ ಬಳಿಗಾರ ,ಕರೇಪ್ಪ ಲಠ್ಠೆ ,ಮಾಹಾದೇವ ಶೆಲಾರ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು