ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹಾಗೂ ಉಗಾರ ಖುರ್ದ ಪಟ್ಟಣದ ಸೈಕಲ್ ಹವ್ಯಾಸಿಗಳು ಸೈಕಲ್ ಮೂಲಕ ಕೊಪ್ಪಳ ಜಿಲ್ಲೆಯ ಕಿಷ್ಕಿಂಧೆ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಹನುಮಾನ್ ದರ್ಶನ ಪಡೆದರು.
ಶುಕ್ರವಾರ ಕುಡಚಿಯಿಂದ ಯಾತ್ರೆ ಪ್ರಾರಂಭಿಸಿ ಸುಮಾರು 317ಕಿ.ಮೀ. ದೂರದ ರಸ್ತೆಯನ್ನು 23ಗಂಟೆಳ ಕಾಲ ಸೈಕಲ ತುಳಿಯುವ ಮೂಲಕ ಕುಡಚಿ ಮಾಜಿ ಪುರಸಭೆ ಅಧ್ಯಕ್ಷ ದತ್ತಾ ಸಣ್ಣಕ್ಕಿ, ದಂತ ವೈದ್ಯ ಡಾ.ಸಚೀನ ಮನಗುತ್ತಿ, ಉಗಾರ ಖುರ್ದದ
ಅಶೋಕ ನಿಡಗುಂದಿ,
ಡಾ.ಅಕಿವಾಟೆ, ಸುಭಾಷ್ ವಾಘಮೊರೆ, ಸಾಗರ್ ಕುಸನಾಳೆ
ವಿನಾಯಕ ಹುನುಗುಂದ, ಹರೀಶ್ ಗಣೇಶ್ವಾಡಿ , ಹಿರಿಯರಾದ ಸುನೀಲ ಕಾಂಬಳೆ, ಸಂತೋಷ್ ಭಂಡಾರಿ ಹುಣ್ಣಿಮೆ ಪ್ರಯುಕ್ತ ಶನಿವಾರ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ರವಿವಾರ ಬೆಳಗ್ಗೆ ಹನುಮನ ದರ್ಶನ ಪಡೆದು ವಾಪಸ್ಸಾಗಿದ್ದಾರೆ.