ಧರ್ಮಸ್ಥಳ ಯೋಜನೆಯಿಂದ  ಮಹಿಳೆಯರಿಗೆ ಶಕ್ತಿ ಬಂದಿದೆ:  ಸಂಸದ  ಮಂಗಳಾ  ಅಂಗಡಿ

Share the Post Now

ಬೆಳಗಾವಿ: ಧರ್ಮಸ್ಥಳ ಯೋಜನೆಯಿಂದ ಸಮಾಜದ ಎಲ್ಲ ವರ್ಗದ ಜನರು ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಮಹಿಳೆಯರು ಸ್ವ ಸಹಾಯ ಸಂಘಗಳಿಂದ ಕುಟುಂಬದ ಶಕ್ತಿಯಾಗಿ ಬದಲಾಗಿದ್ದಾರೆ ಎಂದು ಸಂಸದ  ಮಂಗಳಾ ಸುರೇಶ್ ಅಂಗಡಿ ಹೇಳಿದರು.

ತಾಲೂಕಿನ ಮಾಸ್ತ ಮರಡಿ ವಲಯದ ಶಿಂಧೋಳ್ಳಿ ಗ್ರಾಮದಲ್ಲಿ   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾದ  ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟಗಳ ಪದಗ್ರಹಣ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಿವ್ಯ ಸಾನಿಧ್ಯ ವಹಿಸಿದ್ದ ತಾರಿಹಾಳ ಅಡವಿ ಸಿದ್ದೇಶ್ವರ ಮಠದ ಶ್ರಿ ಅಡಿವೇಶ್ವರ ದೇವರು ಸ್ವಾಮಿಜೀ ಮಾತನಾಡಿ,  ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ನೆಮ್ಮದಿ ಅಡಗಿದೆ, ಇದೇ ನಿಜವಾದ ಸ್ವರ್ಗ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸಂಸ್ಥೆಯ ಮೂಲಕ ಜನರಲ್ಲಿ ಸಂಸ್ಕಾರ, ಶಿಸ್ತು, ಭಕ್ತಿ, ಭಾವನೆ ಬೆಳೆಸಿದ್ದಾರೆ ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷ   ಸತೀಶ್ ಶಹಪೂರಕರ್ ವಹಿಸಿದ್ದರು.  ಡಾ. ನೀಲಕಂಠ ಶಾಸ್ತ್ರಿಗಳು,  ಶಿವಪುತ್ರಪ್ಪ ಪೂಜಾರಿ,  ಬಸವರಾಜ್ ಸೊಪ್ಪಿಮಠ, ಬಾಬಾಗೌಡ ಪಾಟೀಲ,  ಬಾಳು ಅನಾಗೊಳ್ಕರ್,  ಪ್ರಮೋದ್ ಜಾಧವ,  ಅನ್ನಪೂರ್ಣ ಬುರಾಣಿ,   ವಿರೂಪಾಕ್ಷಿ ಇಟಗಿಯವರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಪರಮೇಶ್ವರ್ ರವರು ಸ್ವಾಗತಿಸಿದರು. ಮೇಲ್ವಿಚಾರಕ ಭರತ್ ರವರು ನಿರೂಪಿಸಿದರು.  ಸೇವಾ ಪ್ರತಿನಿಧಿ ಭಾರತಿ  ವಂದಿಸಿದರು,  ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರು,  ಒಕ್ಕೂಟದ ಪದಾಧಿಕಾರಿಗಳು, ಗ್ರಾಮದ ಗಣ್ಯರು  ಇತರರು ಇದ್ದರು.

Leave a Comment

Your email address will not be published. Required fields are marked *

error: Content is protected !!