ಜಾತಿ ಗಣತಿಯಿಂದ ಸಣ್ಣ ಸಮುದಾಯದ ಜಾತಿಗಳಿಗೆ ಅನುಕೂಲ:ಡಿ.ಎಸ್.ಎಸ್ ಸಂಘಟನೆ ಅಭಿಪ್ರಾಯ

Share the Post Now

ಬೆಳಗಾವಿ :ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ಸುದ್ದಿಗೋಷ್ಠಿ ನಡೆಸಿದರು ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಮುಖಂಡರು ಇಂದು ದೇಶಾದ್ಯಂತ ಜಾತಿ ಜನ ಗಣಿತಿ ಚರ್ಚೆಯಲ್ಲಿ ಇದೆ, ಜಾತಿ ಗಣತಿ ಬಗ್ಗೆ ಕೋಮುವಾದಿಯವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇದನ್ನು ನಾವು ವಿರೋಧಸುತ್ತೇವೆ. ಜಾತಿ ಗಣತಿಯಿಂದ ಸಣ್ಣ ಸಣ್ಣ ತಳ ಸಮುದಾಯದ ಜಾತಿಗಳಿಗೆ ಅನುಕೂಲವಾಗುತ್ತದೆ ಜಾತಿ ಆಧಾರದ ಮೇಲೆ ಅವರಿಗೆ ಹೆಚ್ಚಿನ ಸರಕಾರಿ ನೌಕರಿ ಸೌಲಭ್ಯ ಸಿಗುತ್ತದೆ. ಇದಕ್ಕೆ ಕೇಂದ್ರ ಸರಕಾರದ ಮತ್ತು ಕೋಮುವಾದಿ, ಜಾತಿವಾದಿ ಸಂಘಟನೆಗಳ ವಿರೋಧ ವ್ಯಕ್ತಪಡಿಸುತ್ತಿವೆ ಜಾತಿ ಜನಗಣತಿಯಿಂದ ದೇಶ ಒಡೆಯುತ್ತದೆ ಎಂದು ಸುಳ್ಳು ಹೇಳಿಕೆಗಳನ್ನು ಹೇಳಿ ಜನರ ಮನಸ್ಸು ಕೆಡಿಸುತ್ತಿದ್ದಾರೆ ಎಂದರು

ಮೋದಿ ನೇತೃತ್ವದ ಬಿ.ಜೆ.ಪಿ. ಸರಕಾರ ಕಳೆದ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಘೋಷಿಸಿದೆ. ಇದಕ್ಕೆ ನಮ್ಮ ಸಂಘಟನೆಯಿಂದ ಸ್ವಾಗತಿಸುತ್ತೇವೆ. ಆದರೆ ಮೋದಿಯವರು ಮಹಿಳಾ ಮೀಸಲಾತಿ ಜಾರಿಯಾಗ ಬೇಕಾದರೆ 10 ರಿಂದ 15 ವರ್ಷ ಬೇಕಾಗುತ್ತದೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಆದರೆ ಮಹಿಳಾ ಮಿಸಲಾತಿ ಮುಂಬರುವ ಲೋಕಸಭಾ ಚುನಾವಣೆ ವೇಳೆ ಬಾಗಿ ಆಗಬೇಕೆಂದ್ರು ಎಂದರು

ರಾಜ್ಯದಲ್ಲಿ ಮತ್ತು ಪಂಚಾಯಿತಿಯಲ್ಲಿ. ಮೀಸಲಿಟ್ಟ ಹಣ ದುರಪಯೋಗವಾಗುತ್ತಿದ್ದು, ಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಮತ್ತು ಈರಾಜ್ಯದಲ್ಲಿ ಮತ್ತು ಪಂಚಾಯಿತಿಯಲ್ಲಿ. ಜನರಿಗೆ ಮೀಸಲಿಟ್ಟ ಹಣ ದುರಪಯೋಗವಾಗುತ್ತಿದ್ದು, ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಮತ್ತು ಈ ಯೋಜನೆಯು ರಾಷ್ಟ್ರಮಟ್ಟದಲ್ಲಿ ಅನುಷ್ಠಾನಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಕೇಂದ್ರ ಸರಕಾರಕ್ಕೆ ಮತ್ತು ರಾಜ್ಯ ಸರಕಾರಕ್ಕೆ ಒತ್ತಾಯಿಸುತ್ತದೆ ಮತ್ತು ಸಮಿತಿಯು ರಾಜ್ಯಾದ್ಯಾಂತ ಸಂವಿಧಾನ ಸಂರಕ್ಷಣಾ ಜಾಗೃತಿ ಅಭಿಯಾನ ಸಮಾವೇಶಗಳನ್ನು ಪ್ರತಿ ಜಿಲ್ಲೆಯಲ್ಲಿ ಮಾಡಲು ತಿರ್ಮಾನಿಸಿದೆ ಎಂದರು

ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಸಿದ್ದಪ್ಪ ಕಾಂಬಳೆ ನಾಗಣ್ಣ ಬಡಿಗೇರ ರಾಮಣ್ಣ ಕಲ್ಲದೇವನ್ನಹಳ್ಳಿ ಸುರೇಶ ತಳವಾರ ಮಲ್ಲೇಶಿ ಚೌಗಲೆ ಪ್ರತೀಕಾಗೋಷ್ಠಿ ಯಲ್ಲಿ ಇದ್ದರು

Leave a Comment

Your email address will not be published. Required fields are marked *

error: Content is protected !!