ಶ್ರೀಮಾನ್ ನಿಜಗುಣ ಶಿವಯೋಗಿಗಳ, ಸರ್ಪಭೂಷಣರ, ಮಾಲಿಂಗ ರಂಗರ, ವಚನ, ದಾಸರ ಪದಗಳ ಸುಸ್ರಾಯವಾಗಿ ಹಾಡುವ ಗಾಯಕ: ಶಿವಲಿಂಗಪ್ಪ ಮುನ್ಯಾಳ;
ವರದಿ: ಸಂತೋಷ ಮುಗಳಿ, ಮುಗಳಖೋಡ
ಮುಗುಳಖೋಡ: ತತ್ವಪದಗಳ ಚಿಂತಕ, ಶ್ರೀಮನ್ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ, ಮಹಾಲಿಂಗ ರಂಗರ, ಸರ್ಪಭೂಷಣರ ಶಿವಯೋಗಿಗಳ, ವಚನ, ದಾಸರ ತತ್ವಪದಗಳ ಪದಗಳನ್ನು ಸುಸ್ರಾಯವಾಗಿ ಹಾಡೋದರೊಂದಿಗೆ ಕೇಳುಗರ ಇಂಪಾಗುವಂತೆ ತನು, ಮನವನ್ನು ಹಿಂಗಿಸುವಂತೆ ಮುಗಳಕೋಡದ ಗಾನಕೋಗಿಲೆ ಪ್ರಸಿದ್ಧರಾದವರು ಶಿವಲಿಂಗಪ್ಪ ಮುನ್ಯಾಳ. ಬಾಲಕರಿರುವಾಗಲೆ ಭಜನಾ, ಸಂಗೀತ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಫಲಾಪೇಕ್ಷೆಯನ್ನು ಬಯಸದೆ ಭಜನಾ ಸೇವೆಯಲ್ಲಿ ಪಾಲ್ಗೊಂಡು ಈ ಭಜನಾ ಸೇವೆಯನ್ನು ಮುಂದಿನ ತಲೆಮಾಡಿನವರಿಗೆ ಕೊಂಡೊಯ್ಯುತ್ತಿರುವಂತ ಹಿರಿಯ ಭಜನಾ ಕಲಾವಿದರ ಸೇವೆಯು ಸೇವೆಯು ಶ್ಲಾಘಣಿಯವಾದುದು ಎಂದು ಕಪ್ಪಲಗುದ್ದಿ ಗ್ರಾಮದ ಸರ್ಕಾರಿ ಹಿರಿಯ ಮಾದರಿಯ ಶಾಲೆಯ ದೈಹಿಕ ಶಿಕ್ಷಕ ಎಂ.ಕೆ.ಸಂಗಾನಟ್ಟಿ ಹೇಳಿದರು.
ಮುಗಳಖೋಡ ಪಟ್ಟದ ವಾರ್ಡ್ ನಂಬರ್ 8 ಸಂಗಾನಟ್ಟಿ ತೋಟದಲ್ಲಿರುವ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ದಿ: 6ರಂದು ಸೋಮವಾರ ಸಂಜೆ 7ಗಂಟೆಗೆ ಹಮ್ಮಿಕೊಂಡ ಭಜನಾ ಕಾರ್ಯಕ್ರಮದಲ್ಲಿ ಶಿವಲಿಂಗೇಶ್ವರ ದೇವಸ್ಥಾನ ಕಮಿಟಿಯವರು ಗಾನ ಗಾರುಡಿದ ಶಿವಲಿಂಗಪ್ಪ (ಮಹಾದೇವಪ್ಪ) ಮುನ್ನಾಳ ಇವರ ಸತ್ಕಾರ ಸಮಾರಂಭದಲ್ಲಿ ಅತಿಥಿ ಸ್ಥಾನವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಭಜನಾ ಕಲಾವಿದರಾದ ದುಂಡಪ್ಪ ಸಂಗಾನಟ್ಟಿ, ಮಹಾದೇವ ಸಂಘನಟ್ಟಿ, ಮುತ್ತಪ್ಪ ಸಂಗಾನಟ್ಟಿ, ಶ್ರೀಶೈಲ ಸಂಗಾನಟ್ಟಿ, ಶಿವಲಿಂಗ ಸಂಗಾನಟ್ಟಿ, ಮಹಾದೇವ ಸ. ಸಂಗಾನಟ್ಟಿ, ರೇವಪ್ಪ ಸಂಗಾನಟ್ಟಿ, ಮಹಾಲಿಂಗಪ್ಪ ಯಡವಣ್ಣವರ ಚಿದಾನಂದ ಸಸಾಲಟ್ಟಿ, ಕೆಂಪಣ್ಣ ಸಸಾಲಟ್ಟಿ, ಗಂಗಪ್ಪ ಸಂಕಾನಟ್ಟಿ, ತಮ್ಮಣ್ಣ ಗದಗಿನತೋಟ, ಅಪ್ಪಯ್ಯ ಸಂಕಾನಟ್ಟಿ ಇತರರು ಇದ್ದರು.