ಬೆಳಗಾವಿ
ರಾಯಬಾಗ ಪಟ್ಟಣದ ಕೇಂದ್ರ ಶಾಲೆಯಲ್ಲಿ ಜರುಗಿದ ಪ್ರತಿಭಾ ಕಾರಂಜಿಯಲ್ಲಿ ಕುಡಚಿಯ ವಿದ್ಯಾರ್ಥಿ ಝರೀಫಾ ಬದನಕರಿ ಎರಡರಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಝರೀಫಾ ಬದನಕರಿ ರಾಯಬಾಗ ಪಟ್ಟಣದಲ್ಲಿ ಜರುಗಿದ 2023ರ ಪ್ರತಿಭಾ ಕಾರಂಜಿಯಲ್ಲಿ ಕನ್ನಡ ಭಕ್ತಿ ಗೀತೆ ಹಾಗೂ ಕನ್ನಡ ಅಭಿನಯ ಗೀತೆ ಎರಡರಲ್ಲೂ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈ ಸಮಯದಲ್ಲಿ ಶಿಕ್ಷಣ ಸಂಯೋಜಕ ಕಂಬಾರ ಹಾಗೂ ಬೆನಾಡಿ ಸರ ಪ್ರಮಾಣ ಪತ್ರ ಹಾಗೂ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಕುಡಚಿ ಸಂಪನ್ಮೂಲ ವ್ಯಕ್ತಿ ಇಕಬಾಲ ಉಮರಖಾನ, ಶಾಲೆಯ ಮುಖ್ಯೋಪಾಧ್ಯಾಯ ಮುನ್ನಾ ಪಟೇಲ, ಶಿಕ್ಷಕರಾದ ಶ್ರೀದೇವಿ ಬ್ಯಾಕುಡೆ, ಸಮೀರಾ ಚಮನಮಲಿಕ, ದೇವಾನಂದ ಮಾಡಲಗಿ ಹಾಗೂ ಇತರರು ಉಪಸ್ಥಿತರಿದ್ದರು