ಮುಗಳಖೋಡ:ಬೆಳಕಿನ ಹಬ್ಬ ದೀಪಾವಳಿ ದಿ:14ರಂದು ಉಚಿತ ಅಂಬುಲೆನ್ಸ್ ಸೇವೆ ಆರಂಭ; ದಿನದ 24*7 ಗಂಟೆಗಳಲ್ಲಿ ಉಚಿತ ಸೇವೆ;
ಸಮಾಜ ಸೇವೆಯನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಕರುಣಾಮಯಿ, ಬಡವರ ಬಂಧು ಡಾ.ಸಿ.ಬಿ.ಕುಲಿಗೋಡ;
ಬೆಳಗಾವಿ.ಮುಗಳಖೋಡ: ಪಟ್ಟಣದ ನಿವಾಸಿಗಳಿಗೆ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಈ ವರುಷವು ಒಂದು ವಿಶೇಷ ಉಡುಗೊರೆ ಸಿಕ್ಕಂತಾಗಿದೆ. ರಾಜಕೀಯ ಹಿರಿಯ ಧುರೀಣ, ಶಿಕ್ಷಣ ಪ್ರೇಮಿ, ಬಡವರ ಬಂಧು, ಸಮಾಜ ಸುಧಾರಕ, ಡಾಕ್ಟರ್ ಸಿ.ಬಿ.ಕುಲಿಗೋಡ ಅವರ ದೂರ ದೃಷ್ಟಿಯಿಂದ ಪಟ್ಟಣ ಬಡ ಜನರಿಗಾಗಿ, ದಿನ ದಲಿತ,ದುರ್ಬಲ, ಶೋಷಿತರಿಗಾಗಿ 24*7 ಉಚಿತ ಆಂಬುಲೆನ್ಸ್ ಸೇವೆಯನ್ನು ದೀಪಾವಳಿ ದಿನದಂದು ಅರ್ಪಿಸುತ್ತಿರುವುದು ಸಂತಸದ ಸಂಗತಿಯಾಗಿದೆ.
ಬೆಳಕಿನ ಹಬ್ಬ ದೀಪಾವಳಿ ದಿನದಂದು ಮಂಗಳವಾರ ದಿ: 14 ರಂದು ಮುಂಜಾನೆ 11ಗಂಟೆಗೆ ಬಿ.ಎನ್.ಕೆ ಪ್ರೌಢಶಾಲೆ ಆವರಣದ, ಶ್ರೀ ಸಾಯಿಬಾಬಾ ಮಂದಿರದ ಪಕ್ಕದಲ್ಲಿ ಮುಗಳಖೋಡ ಪಟ್ಟಣದಿಂದ 24*7 ಉಚಿತ ಆಂಬುಲೆನ್ಸ್ ಸೇವೆಯನ್ನು ಆರಂಭಿಸಲಿದ್ದಾರೆ.
ಪರಮಪೂಜ್ಯ 108 ಶಾಂತಮೂರ್ತಿ ವಾತ್ಸಲ್ಯ ರತ್ನಾಕರ, ಶ್ರೀ ವಿಮಲೇಶ್ವರ ಮಹಾರಾಜರು ದಿವ್ಯ ಸಾನಿಧ್ಯವಹಿಸುವರು. ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕ ಮಹೇಂದ್ರ ತಮ್ಮಣ್ಣವರ ಅವರು 24*7 ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡುವರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಬಡವರ ಬಂಧು, ಡಾಕ್ಟರ್ ಸಿ.ಬಿ. ಕುಲಿಗೋಡ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಈ ಸಂದರ್ಭದಲ್ಲಿ ಡಾ. ಸಂತೋಷ ಕುಲಿಗೋಡ, ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಜಯ ಕುಲಿಗೋಡ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಆದಪ್ಪುಗೋಳ, ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಪ್ರಕಾಶ ಕಂಬಾರ, ಪಿಯು ಕಾಲೇಜ್ ಪ್ರಾಚಾರ್ಯ ಡಾ.ಮಧುಸೂದನ ಬೀಳಗಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್.ಮದಾಳೆ, ರೈನ್ಬೋ ಸೆಂಟರ್ ಸ್ಕೂಲ್ ಪ್ರಾಚಾರ್ಯ ಜಿ. ರಮೇಶ, ಬಾ.ಸಿ.ಮಠಪತಿ ಪ್ರಾಥಮಿಕ ಶಾಲೆಯ ಪ್ರಧಾನಗುರು ಬಿ.ಎ.ಕೊಪ್ಪದ, ಐಟಿಐ ಕಾಲೇಜ್ ಪ್ರಾಚಾರ್ಯರ ಪಿ.ಜಿ.ಕುಲಿಗೋಡ ಇತರರು ಆಗಮಿಸುವರು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ದಿ: 14ರಂದು ದೀಪಾವಳಿ ಹಬ್ಬದ ಪ್ರಯುಕ್ತ ಉಚಿತ ಅಂಬುಲೆನ್ಸ್ ಸೇವೆಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಂದ ಚಾಲನೆ ನೀಡುವರು.