ರಾಯಬಾಗ:ಉತ್ತಮ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಅವಶ್ಯವಾಗಿದೆ.

Share the Post Now


ದೇಶದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಸಂವಿಧಾನದಡಿ ಮತದಾನ ಮಾಡುವ ಹಕ್ಕನ್ನು ಕೊಟ್ಟಿದ್ದು ಎಲ್ಲ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಅತ್ಯಮೂಲ್ಯವಾದ ಮತದಾನ ಹಕ್ಕನ್ನು ಪಡೆಯಬೇಕೆಂದು ರಾಯಬಾಗ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಠ್ಠಲ ಚಂದರಗಿ ಅವರು ಹೇಳಿದರು.

ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳಿಯ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ ಯುವ ಮತದಾರರ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮತದಾರ ಪಟ್ಟಿಯಲ್ಲಿ ನೋಂದಣಿ ಮತ್ತು ಪರಿಷ್ಕರಣೆಯು ಈಗ ಬಹಳ ಸುಲಭವಾಗಿದ್ದು ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಮೊಬೈಲಿನಲ್ಲಿ ವೋಟರ್ಸ್ ಹೆಲ್ಪ್ ಲೈನ್ ಅಪ್ಲಿಕೇಶನ ಮೂಲಕ ಅಗತ್ಯ ದಾಖಲೆ ಸಲ್ಲಿಸಿ ಮತದಾರ ಪಟ್ಟಿಯಲ್ಲಿ ತಮ್ಮ ಮತ್ತು ಕುಟುಂಬದವರ ಹೆಸರನ್ನು ನೋಂದಾಯಿಸಿಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿ ಬೀರಣ್ಣಗಡ್ಡಿ, ಪ್ರಾಚಾರ್ಯ ಕಿರಣ ಪಾಟೀಲ,ಎ.ಬಿ ಒಡೆಯರ್,ಎಮ್ ಎ ಹಂಜಿ,ಪಿ ಆರ್ ಸವದತ್ತಿ,ಎಸ್ ಎಮ್ ಲೈನದಾರ, ಎಮ್ ಆರ್ ಕಠಾರಿ, ಕಾಶಿನಾಥ್ ಜವಳಿ, ಎಸ್ ಎಸ್ ಕುರಬೇಟಿ,ಆಯ್ ಆರ್ ಪತ್ತಾರ,ರಾಜು ಕಾಂಬಳೆ‌ ಸೇರಿದಂತೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!