ಬೆಳಗಾವಿಯಲ್ಲಿ ಮಹಿಳೆಯರಿಗಾಗಿ ಉದ್ಯೋಗ ಹಾಗೂ ಬಂಡವಾಳ ಸಹಕಾರದ ಸುವರ್ಣಾವಕಾಶ…ಬೆಳಗಾವಿಯಲ್ಲಿ ಮಹಿಳೆಯರಿಗಾಗಿ ಉದ್ಯೋಗ ಹಾಗೂ ಬಂಡವಾಳ ಸಹಕಾರದ ಸುವರ್ಣಾವಕಾಶ..
ಸುಮಾರು 200ಕ್ಕಿಂತ ಅಧಿಕ ಯೋಜನೆಗಳು, ಅವಕಾಶಗಳು ಮಹಿಳೆಯರಿಗೆ ಮಿಸಲಿವೆ..
ಮಹಿಳಾ ಉದ್ಯಮಿ, ಶಿಲ್ಪಾ ಗೋಡಿಗೌಡರ..
ಬೆಳಗಾವಿ : ಶುಕ್ರವಾರ ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಬೆಳಗಾವಿಯ ಶಿಲ್ಪಾ ಗ್ರೂಪ್ ಆಫ್ ಕಂಪನಿಯ ಮುಖ್ಯಸ್ಥೆಯಾದ ಶಿಲ್ಪಾ ಗೋಡಿಗೌಡರ ಅವರು ಮಹಿಳಾ ಸಬಲೀಕರಣದ ವೇದಿಕೆಯಿಂದ, ಮಹಿಳೆಯರಿಗಾಗಿ ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ..
ಬೆಳಗಾವಿಯ ಕಾರಂಜಿ ಮಠದ ಶ್ರೀ ಗುರುಸಿದ್ದ ಮಹಾಸ್ವಾಮೀಜಿ ಅವರ ಆಶೀರ್ವಾದದಿಂದ, ಮಹಿಳಾ ಸಬಲೀಕರಣ ವೇದಿಕೆಯಿಂದ ಹಲವಾರು ಯೋಜನೆಗಳನ್ನು ಹಾಗೂ ಅವಕಾಶಗಳನ್ನು ಪರಿಚಯಿಸುತ್ತಿದ್ದು, ಮನೆಯಲ್ಲಿ ಕುಳಿತು ಕೆಲಸ ಕಾರ್ಯಗಳನ್ನು ಹುಡುಕುತ್ತಿದ್ದ ಮಹಿಳೆಯರಿಗಾಗಿ ಈ ವೇದಿಕೆ ವರದಾನ ಆಗಲಿದೆ ಎಂದಿದ್ದಾರೆ..
ಈ ಯೋಜನೆಗಳ ಮುಖಾಂತರ 200ಕ್ಕಿಂತ ಅಧಿಕ ಹೊಸ ಯೋಜನೆಗಳು ಹಾಗೂ ಅವಕಾಶಗಳು ಮಹಿಳೆಯರಿಗೆ ಲಭಿಸುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿಯೇ 10,000 ಕ್ಕಿಂತ ಅಧಿಕ ಮಹಿಳೆಯರಿಗೆ ಲಾಭದಾಯಕ ಆಗುತ್ತದೆ ಎಂದಿದ್ದಾರೆ..
ಆಸಕ್ತ ಮಹಿಳೆಯರು 6363444423 ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು, ನೋಂದಾವಣಿಗೆ 10/12/2023 ಕೊನೆಯ ದಿನ ಆಗಿದ್ದು, ಆದಷ್ಟು ಬೇಗ ಹೆಸರು ನೋಂದಾಯಿಸಿಕೊಳ್ಳಬೇಕು ಎಂಬ ಮನವಿ ಮಾಡಿದರು..
ನೋಂದಾವಣಿ ಆದ ನಂತರ 12/12/2023 ರಂದು ಮಹಾಂತೇಶ್ ನಗರದ ಮಹಾಂತ ಭವನದಲ್ಲಿ ಸಭೆ ನಡೆಸಿ ಮುಂದಿನ ಹಂತದ ಚರ್ಚೆ ಮಾಡಲಾಗುವುದು ಎಂದರು..
ಈ ಸುದ್ದಿಗೋಷ್ಠಿಯಲ್ಲಿ ಶ್ರೀ ಕಾರಂಜಿ ಮಠದ ಗುರುಸಿದ್ದ ಮಹಾಸ್ವಾಮಿಗಳು, ಉದ್ಯಮಿ ಶಿಲ್ಪಾ ಗೋಡಿಗೌಡರ, ಡಾ ಸವಿತಾ ಕದ್ದು, ಫ್ರೋ ಮಾಧುರಿ ಕುಲ್ಕರ್ಣಿ, ಮಂಜು ಗಡ್ಡೆ, ಮತ್ತಿತರರು ಉಪಸ್ಥಿತರಿದ್ದರು