ವರದಿ: ಸಂಗಮೇಶ ಹಿರೇಮಠ.
ಬೆಳಗಾವಿ: ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ತಂದೆ ಗೌತಮ ಪದಪ್ಪಗೋಳ, ತಾಯಿ ದಿವಂಗತ ಸುರೇಖಾ ಪದಪ್ಪಗೋಳ ಇವರ ಮಗಳಾದ, ಕುಮಾರಿ ಪ್ರೀತಿ ಗೌತಮ ಪದಪ್ಪಗೋಳ ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಸಮಾಜಶಾಸ್ತ್ರ ವಿಭಾಗದಲ್ಲಿ “ಎ ಸೋಸಿಯಾಲಜಿಕಲ್ ಸ್ಟಡಿ ಆಫ್ ಹೊಮ್ ಮೆಕರ್ಸ” ಎಂಬ ಶೀರ್ಷಿಕೆಯ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಗಿಟ್ಟಿಸಿಕೊಂಡಿದ್ದಾರೆ.
ಇವರಿಗೆ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಸುಮಂತ್ ಎಸ್. ಹಿರೇಮಠ ಅವರು ಮಾರ್ಗದರ್ಶನ ನೀಡಿರುತ್ತಾರೆ.
ಪ್ರೀತಿ ಪದಪ್ಪಗೋಳ ಇವರ ಸಾಧನೆ ಕಂಡು ಕುಟುಂಬ ವರ್ಗ, ಗ್ರಾಮಸ್ಥರು, ಸಹಪಾಠಿಗಳು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.