ಕನ್ನಡ ನಾಡು ಹೆಮ್ಮೆಯ ನಾಡು :ಹಣಮಂತ ಪಾರ್ಶಿ

Share the Post Now

ಮೂಡಲಗಿ .

ಶರಣ, ಸಾಧು ಸಂತರ ನೆಲೆಭಿಡು ಹೆಮ್ಮೆಯ ಕನ್ನಡ ನಾಡು ನಮ್ಮದು ಭಾಷೆ ನೆಲ ಜಲ ದೇಶಾಭಿಮಾನವು ಪ್ರತಿಯೊಬ್ಬರಲ್ಲಿ ರಬೇಕು ಎಂದು ಹಣಮಂತ ಪಾರ್ಶಿ ಹೇಳಿದರು.

ಅವರು ಮೂಡಲಗಿ ಪಟ್ಟಣದ ಶ್ರೀ ರಂಗ ಸಾಂಸ್ಕೃತಿಕ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನ ದೀಪ್ತಿ ಸಾಹಿತ್ಯ ಪ್ರತಿಷ್ಠಾನ ಮೂಡಲಗಿ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮದ ಅದ್ಯಕ್ಷರಾಗಿ ಮಾತನಾಡಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೀವನದಲ್ಲಿ ಕನ್ನಡ ಭಾಷೆಗೆ ಹೆಚ್ಚು ಮಹತ್ವ ನೀಡಬೇಕು ಎಂದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಮಾನವನಾಗಿ ಹುಟ್ಟಿದಮೇಲೆ ಸಮಾಜಕ್ಕೆ ಕೊಡುಗೆ ನೀಡಬೇಕೆನ್ನುವ ಒಳ್ಳೆಯ ಮನೋಭಾವ ಬೆಳೆಸಿಕೊಳ್ಳಬೇಕು. ಬಸವಣ್ಣವರು ಹೇಳಿದಂತೆ ಸತ್ಯ ನಿಷ್ಠೆಯಿಂದ ಕೆಲಸ ಕಾರ್ಯ ಮಾಡಿದರೆ ತಕ್ಕ ಪ್ರತೀ ಪಲ ಸಿಗುತ್ತದೆ. ಸಮಾಜ ಪರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದರೆ ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನ ಮಾನ ದೊರೆಯುತ್ತದೆ ಎಂದು ಹೇಳಿದರು.

ಡಾ ಮಹಾದೇವ ಪೋತರಾಜ ಮಾತನಾಡಿ ಉಪನ್ಯಾಸಕರಾಗಿ ಮಾತನಾಡಿ ಬಸವಣ್ಣನವರು 12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿ ಶರಣ ಸಂತರನ್ನು ಕೂಡಿಸಿ ಜಗತ್ತನ್ನು ಉದ್ದಾರ ಮಾಡಿದ್ದಾರೆ. ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಕಡಿವಾಣ ಹಾಕಿದರು. ಸಂಗಯ್ಯ ಎಂಬ ಶರಣರು ವೇಶ್ಯೆಯರು ಮನೆಗೆ ತೆರಳಿ ಇಷ್ಟಲಿಂಗ ಪೂಜೆ ನೆರವೇರಿಸಿ ಸ್ವರ್ಗದ ಸುಖ ನೋಡಿದರು. ಹಡಪದ ಅಪ್ಪಣ್ಣ ಮೋಳಿಗೆ ಮಾರಯ್ಯ ಅನೇಕ ಶರಣರ ನಡೆದು ಬಂದ ದಾರಿ ಬಗ್ಗೆ ಹೇಳಿದರು. ಜ್ಞಾನ ದೀಪ್ತಿ ಸಾಹಿತ್ಯ ಪ್ರತಿಷ್ಠಾನ ಹಾಗೂ ಕ ಸಾ ಪ ಅಧ್ಯಕ್ಷ ಡಾ ಸಂಜಯ ಶಿಂಧಿಹಟ್ಟಿ. ಬಸವರಾಜ ತೇಲಿ. ಬಿ ವಾಯ ಶಿವಾಪೂರ. ಎ ಎಚ್ ಒಂಟಗೊಡಿ. ವಿ ಆರ ತರಕಾರ. ಎಸ್ ಎಂ ಗೂಜಗೊಂಡ. ತಳವಾರ ಸರ. ಎಸ್ ಎಸ್ ಕುರನೆ. ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನ ದೀಪ್ತಿ ಸಾಹಿತ್ಯ ಪ್ರತಿಷ್ಠಾನ ಸರ್ವ ಸದಸ್ಯರಿದ್ದರು.ಪ್ರಾರಂಭದಲ್ಲಿ ಲತಾ ತಳವಾರ ಪ್ರಾರ್ಥನೆ ಗೀತೆಯನ್ನು ಹಾಡಿದರು.

Leave a Comment

Your email address will not be published. Required fields are marked *

error: Content is protected !!