ಬೆಳಗಾವಿ.ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಏಡ್ಸ್ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕುಡಚಿಯ ಶ್ರೀ ಸಾಯಿ ಆಸ್ಪತ್ರೆಯ ಡಾ.ಸುಮೀತಕುಮಾರ ಸಣ್ಣಕ್ಕಿ ಇವತ್ತಿನ ಆಧುನಿಕ ಜಗತ್ತಿನ ಯುವ ಪೀಳಿಗೆ ದುಶ್ಚಟಗಳ ದಾಸರಾಗಿ ತಮ್ಮ ಕರ್ತವ್ಯವನ್ನು ಮರೆತು ಜೀವನಕ್ಕೆ ಅವಶ್ಯಕತೆ ಇಲ್ಲದ ದಾರಿಯಲ್ಲಿ ನಡೆಯುತ್ತಾ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಬಾಳನ್ನು ಹಾಳು ಮಾಡಿಕೊಳ್ಳುತಿದ್ದಾರೆ.
ಗುರುಗಳು, ಪಾಲಕರ ಬಗ್ಗೆ ಗೌರವ ಇಲ್ಲದಂತಾಗಿದೆ. ಇವತ್ತಿನ ಯುವ ಪೀಳಿಗೆಯ ದಿನಮಾನಗಳು ಚಿಂತಾಜನಕವಾಗಿವೆ” ಆದ್ದರಿಂದ ವಿದ್ಯಾರ್ಥಿಗಳು ನೌಕರಿಗಾಗಿ ಅಷ್ಟೇ ಶಿಕ್ಷಣ ಪಡೆಯದೆ ಮೌಲ್ಯಯುತವಾದ ಉಜ್ವಲ ಬದುಕಿಗಾಗಿ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು. ನಂತರ ಡಿಸೆಂಬರ್ ಒಂದು ಏಡ್ಸ್ ದಿನಾಚರಣೆ ಕುರಿತು ಮಕ್ಕಳಿಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಿರೀಶ ದರೂರ, ಪ್ರಾಂಶುಪಾಲರಾದ ಜಿ.ಆರ್.ಸುಳ್ಳದ, ಉಪನ್ಯಾಸಕರಾದ ಎಸ್. ಎಸ್. ಅಣ್ಣಿಗೇರಿ, ಎಂ.ಹೇಮಂತ, ಎನ್.ಎನ್. ಆದೆಪ್ಪನವರ, ಶಂಕರ ಮೋಕಾಶಿ ಹಾಗೂ ವಿನಾಯಕ ಐಹೊಳೆ ಇತರರು ಭಾಗಿಯಾಗಿದ್ದರು.